ಸಿದ್ದಕಟ್ಟೆ: ಬಾಲಕಿ ಚಿಕಿತ್ಸೆಗೆ ವೀರ -ವಿಕ್ರಮ ಜೋಡುಕರೆ ಕಂಬಳ ಸಮಿತಿ ಸ್ಪಂದನೆ.

Coastal Bulletin
ಸಿದ್ದಕಟ್ಟೆ: ಬಾಲಕಿ ಚಿಕಿತ್ಸೆಗೆ ವೀರ -ವಿಕ್ರಮ ಜೋಡುಕರೆ ಕಂಬಳ ಸಮಿತಿ ಸ್ಪಂದನೆ.

ಬಂಟ್ವಾಳ: ಇಲ್ಲಿನ ಕರ್ಪೆ ಗ್ರಾಮದ ಕುಟ್ಟಿಕಳ ಎಂಬಲ್ಲಿ ಕ್ಯಾನ್ಸರ್ ರೋಗದಿಂದ ಬಳ ಲು ತ್ತಿರುವ ಹಿರಣ್ಯಾ ಕ್ಷ ಶಾಂತಿ ಮತ್ತು ಸೌಮ್ಯ ದಂಪತಿಗಳ 5 ವರ್ಷದ ಬಾಲಕಿ ಚಿಕಿತ್ಸೆ ಗೆ ಸಿದ್ದಕಟ್ಟೆ ಕೊಡಂಗೆ ವೀರ -ವಿಕ್ರಮ ಜೋಡುಕರೆ ಕಂಬಳ ಸಮಿತಿ ಸ್ಪಂದಿಸಿದೆ.

ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ನೇತೃತ್ವದ ಸಮಿತಿ ಪದಾಧಿಕಾರಿಗಳು ಬಾಲಕಿ ಮನೆಗೆ ಭಾನುವಾರ ಭೇಟಿ ನೀಡಿರೂ. 20ಸಾವಿರ ಮೊತ್ತದ ದೇಣಿಗೆ ನೀಡಿದರು.

ಕಂಬಳ ಸಮಿತಿಯು ಕೇವಲ ಕಂಬಳಕ್ಕೆ ಸೀಮಿತವಾಗದೆ ಈಗಾಗಲೇ ಸುಮಾರು ರೂ 2ಲಕ್ಷಕ್ಕೂ ಮಿಕ್ಕಿ ಮೊತ್ತದ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಸ್ಪಂದಿಸಿದೆ

ಎಂದು ಅವರು ತಿಳಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಪದಾಧಿಕಾರಿಗಳಾದ ಚಂದ್ರಶೇಖರ ಪೂಜಾರಿ ಕೊಡಂಗೆ, ಕಿರಣ್ ಕುಮಾರ್  ಮಂಜಿಲ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಮಧುಸೂದನ್ ಸಾಲಿಯಾನ್, ಪ್ರಮುಖರಾದ ಸತೀಶ್ ಪೂಜಾರಿ ಅಲಕ್ಕೆ, ಪ್ರಭಾಕರ ಪ್ರಭು, ತೇಜಸ್ ಪೂಜಾರಿ ಕರ್ಪೆ, ಯೋಗೀಶ್ ಪೂಜಾರಿ ಕರ್ಪೆ ಇದ್ದರು.

Leave a Comment