ಬಂಟ್ವಾಳ :ಆಧುನಿಕ ದಿನಗಳಲ್ಲಿ ಶಾಲಾ ಶಿಕ್ಷಣದ ಜೊತೆಗೆ ಮಕ್ಕಳು ಇಂತಹ ವ್ಯಕ್ತಿತ್ವ ವಿಕಸನದ ಶಿಬಿರಗಳಲ್ಲಿ ತೊಡಗಿಸಿಕೊಂಡಾಗ ಮಕ್ಕಳು ದೈಹಿಕ ಮತ್ತು ಮಾನಸಿಕ ಸದೃಢತೆಯೊಂದಿಗೆ ಸನಾತನ ಸಂಸ್ಕೃತಿಯ ವಿಚಾರಧಾರೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ಟಿ ತಾರಾನಾಥ ಕೊಟ್ಟಾರಿ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಪುದು ಗ್ರಾಮದ ಶ್ರೀ ಕ್ಷೇತ್ರ ನಾಣ್ಯದಲ್ಲಿ ಮೇ 1ರಂದು ಬುಧವಾರ ಸಂಸ್ಕಾರ ಭಾರತಿ ಬಂಟ್ವಾಳ ತಾಲೂಕು ಘಟಕದ ಅಶ್ರಯದಲ್ಲಿ ನಡೆದ "ಸಂಸ್ಕಾರ ಸೌರಭ" ಮಕ್ಕಳ ಬೇಸಿಗೆ ರಜಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಶಿಬಿರದ ನಿರ್ದೇಶಕರಾದ ಪ್ರೊ. ಚೇತನ್ ಮುಂಡಾಜೆ, ಶಿಬಿರದ ಸಂಯೋಜಕರಾದ ಉಮಾ ಚಂದ್ರಶೇಖರ್ ತುಂಬೆ, ಸ್ಥಳೀಯ ಪ್ರಮುಖರಾದ ರಾಮಚಂದ್ರ ಬಂಗೇರ, ಗಣೇಶ್ ಸುವರ್ಣ ತುಂಬೆ, ವಿದ್ಯಾ ಶೇಖರ್,
ಗಿರೀಶ್ ಶೆಟ್ಟಿ ಕುಂಪಣಮಜಲು, ನವೀನ್ ರಾಮನಕಟ್ಟೆ,ಪ್ರವೀಣ್ ಕಬೇಲ, ಸುರೇಶ್ ಕುಮ್ದೇಲ್ ಉಪಸ್ಥಿತರಿದ್ದರು.
ಸದಾಶಿವ ಅಳಿಕೆ ಪ್ರಸ್ತಾವನೆಗೈದು, ಸ್ಥಳೀಯ ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ಸ್ವಾಗತಿಸಿ, ನವೀನ್ ಚಾಪೆ ವಂದಿಸಿದರು, ಕುಮಾರಿ ಮನಿಷಾ ಕೋಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು. ಮಾನಸ ಕಡೆಗೋಳಿ ದ್ಯೇಯ ಗೀತೆ ಹಾಡಿದರು, ಶ್ರೀಮತಿ ಭುವನೇಶ್ವರಿ, ಶ್ರೀಮತಿ ಮಮತಾ,ಶ್ರೀಮತಿ ಪ್ರಾತಿಮಾ, ಚಿತ್ರರಂಜನ್ ನಾಣ್ಯ ಬಾಲಕೃಷ್ಣ ನಾಣ್ಯ, ಕೇಶವ ನಾಣ್ಯ ಸುಕೇಶ್ ಶೆಟ್ಟಿ ತೇವು,ಶೇಖರ್ ನಾಣ್ಯ ಸಹಕರಿಸಿದರು.ಶಿಬಿರದಲ್ಲಿ 84 ವಿದ್ಯಾರ್ಥಿಗಳು ಭಾಗವಹಿಸಿದರು.










