ಮಂಗಳೂರು:ವಿದ್ಯಾ ಪ್ರಕಾಶನ ಮಂಗಳೂರು ಹಾಗೂ ಥಂಡರ್ ಕಿಡ್ಸ್ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ *ಗುಬ್ಬಿದ ಗೂಡು* ಪುಟಾಣಿ ಮಕ್ಕಳ ವಾದ್ಯ ಗೋಷ್ಠಿ ಹಾಗೂ ಗಾಯನ ತಂಡದ ಉದ್ಘಾಟನೆ ಮತ್ತು ರಾಘು ಇಡ್ಕಿದು ರವರ *ಭಾವಯಾನ* ಕನ್ನಡ-ತುಲು ಭಾವಗೀತೆಗಳು ಹಾಗೂ ವಿನಮ್ರ ಇಡ್ಕಿದು ಹಾಡಿರುವ ಭಾವಗೀತೆಗಳ ಬಿಡುಗಡೆಯು ಮೇ.01 ಸೋಮವಾರ ರಂದು ಮಂಗಳೂರು ಕೊಡಿಯಾಲ್ ಬೈಲ್‌ನಲ್ಲಿರುವ ಶಾರದಾ ಕಾಲೇಜಿನಲ್ಲಿ ನಡೆಯಿತು.
ಭಾವಗೀತೆಗಳನ್ನು ಶ್ರೀ ಎಂ ರಂಗನಾಥ ಭಟ್,ಗೌರವ ಕಾರ್ಯದರ್ಶಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು ಮಂಗಳೂರು ರವರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಫ್ರೊ.ಪಿ.ಕೃಷ್ಣಮೂರ್ತಿ, ಪ್ರಾಂಶುಪಾಲರು ಗೋವಿಂದದಾಸ ಕಾಲೇಜು ಸುರತ್ಕಲ್, ಶ್ರೀಮತಿ ಸುರೇಖಾ ಆರ್ ಭಟ್ , ಪ್ರಾಂಶುಪಾಲರು,ಕೆನರಾ ಹೈಸ್ಕೂಲ್ ಸಿ ಬಿ ಎಸ್ ಈ, ಮಂಗಳೂರು, ಶ್ರೀಮತಿ ಯು.ವಿಜಯಲಕ್ಷ್ಮಿ,ಕೆನರಾ ಬ್ಯಾಂಕ್ ಮಂಗಳೂರು ಶುಭಹಾರೈಸಿದರು.ಶ್ರೀ ಎಲ್ಲೂರು ಶ್ರೀನಿವಾಸ ರಾವ್,ಸಂಗೀತ ನಿರ್ದೇಶಕರು ಥಂಡರ್ ಕಿಡ್ಸ್ , ಮಂಗಳೂರು ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಥಂಡರ್ ಕಿಡ್ಸ್ ನಾ
ಮಕ್ಕಳಿಂದ ವಾದ್ಯ ಸಂಗೀತ ಮತ್ತು ಭಾವಗೀತೆಗಳ ಗಾಯನ ನಡೆಯಿತು, ಮಕ್ಕಳ ಪ್ರತಿಭೆಯನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಬೆಂಗಳೂರಿನಿಂದ ಆಗಮಿಸಿದ ತುಳುವೆರೆ ಚಾವಡಿಯ ಸಕ್ರೀಯ ಸದಸ್ಯ ಹಾಗೂ *ಜೋಕುಲೆ ಉಜ್ಜಲ್* ಮಕ್ಕಳ ಕವನ ಸಂಕಲನದ ಸಂಪಾದಕರಾದ ಸತೀಶ್ ಅಗ್ಪಲ ರನ್ನು ವೇದಿಕೆಯಲ್ಲಿ ಗೌರವಿಸಲಾಯಿತು, ಥಂಡರ್ ಕಿಡ್ಸ್ ನಾ ಸಂಗೀತ ನಿರ್ದೇಶಕರಾದ ಶ್ರೀನಿವಾಸ ರಾವ್‌ರವರನ್ನು ಸನ್ಮಾನಿಸಿದರು.
ಕಾರ್ಯಕ್ರಮವನ್ನು ರಾಘು ಇಡ್ಕಿದು ದಂಪತಿಗಳು ನಿರ್ವಹಿಸಿ ಕೊನೆಗೆ ಧನ್ಯವಾದ ಸಮರ್ಪಿಸಿದರು. ಮಕ್ಕಳ ಗೀತಾ ಗಾಯವು ಜನ ಮನೆ ಗೆದ್ದಿತು.
















