ಮಂಗಳೂರು :ಬದುಕಿಗೊಂದು ಆಸರೆ (ರಿ) ಮಲ್ಲೂರು ಹಾಗೂ ಲಯನ್ಸ್ ಕ್ಲಬ್ ಕಾವೂರು ಇದರ ಸಹಯೋಗದೊಂದಿಗೆ ಮಲ್ಲೂರು ಸಂಭ್ರಮ-24, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮವು ಮಾ 10ರಂದು ಮಲ್ಲೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸಂಜೆ ಗಂಟೆ 6-30 ರಿಂದ ಹೆಸರಾಂತ ಗಾಯಕಿ ವಿದ್ಯಾ ಸುವರ್ಣ ಮಲ್ಲೂರು ಇವರ ಸಾರಥ್ಯದಲ್ಲಿ ಸ್ವರ ಸಂಗಮ, 7.30ರಿಂದ ಸಭಾ ಕಾರ್ಯಕ್ರಮ, 9.30ರಿಂದ ಮಲ್ಲೂರು ರಾಮಕೃಷ್ಣ ಬಾಲಗೋಕುಲ ತಂಡದಿಂದ
ಸಾಂಸ್ಕೃತಿಕ ವೈಭವ ರಾತ್ರಿ 10-30ರಿಂದ ವಿಜಯ ಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ "ಮೈತಿದಿ"ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಪ್ರ. ಕಾರ್ಯದರ್ಶಿ ಪ್ರಕಾಶ್ ಮಲ್ಲೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









