Coastal Bulletin

ಬಂಟ್ವಾಳ :ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ,ನೇತ್ರಾವತಿ ವಲಯ ಜಿಲ್ಲಾ ಸಮಿತಿ ವತಿಯಿಂದ ರಥ ಸಪ್ತಮಿ ಪ್ರಯುಕ್ತ ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣೇಶ್ವರ ದೇವಸ್ಥಾನ ಕೊಯಿಲದಲ್ಲಿ ಭಾನುವಾರ ಮುಂಜಾನೆ ಸಾಮೂಹಿಕ 108 ಸೂರ್ಯ ನಮಸ್ಕಾರ ಆಯೋಜಿಸಲಾಯಿತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಭಜನಾ ಮಂಡಳಿ ಅಧ್ಯಕ್ಷ ಸಂದೇಶ್ ಅಂತರ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ

ವಲಯ ಪೊಳಲಿ ನಗರ ಸಂಚಾಲಕಿ ಶ್ತೀಮತಿ ರೇಖಾ, ಜಿಲ್ಲಾ ಲೆಕ್ಕ ಪತ್ರ ಪ್ರಮುಖರಾದ ಶಿವಪ್ರಸಾದ್, ಜಿಲ್ಲಾ ಚಿಂತನ ಕೂಟ ಮತ್ತು ಪ್ರಶಿಕ್ಷಣ ಪ್ರಮುಖರಾದ ಲೋಕೇಶ್ ಉಪಸ್ಥಿತರಿದ್ದರು.

ರಥಸಪ್ತಮಿಯ ವಿಶೇಷತೆ ಬಗ್ಗೆ ಲತಾ ಬೌದ್ಧಿಕ್ ನೀಡಿದರು. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ವಂದಿಸಿದರು.

Leave a Comment