ಬಂಟ್ವಾಳ, ಸೆ. ೧೨: ಶ್ರೀರಾಮ ಪದವಿ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿ ರೆಡ್‌ಕ್ರಾಸ್ ಘಟಕ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರವು ದಿನಾಂಕ ೧೪.೦೯.೨೦೨೪, ಶನಿವಾರ ಸಮಯ ಬೆಳಗ್ಗೆ ೧೦.೦೦ರಿಂದ ಮಧ್ಯಾಹ್ನದವರೆಗೆ ನಡೆಯಲಿದೆ.
ಈ ಕಾರ್ಯಕ್ರಮವು ಪಾಂಚಜನ್ಯ ಹಿರಿಯ ವಿದ್ಯಾರ್ಥಿ ಸಂಘ, ಪ್ರಣವ ವಿದ್ಯಾರ್ಥಿ ಸಂಘ, ಭಾರತೀಯ ರೆಡ್‌ಕ್ರಾಸ್ ಘಟಕ, ಶ್ರೀರಾಮ ಆಟೋ ಚಾಲಕ- ಮಾಲಕ ಸಂಘ ಕಲ್ಲಡ್ಕ, ನೇತಾಜಿ ಯುವಕ ಮಂಡಲ ರಿ., ಓಂ ಶಕ್ತಿ ಫ್ರೆಂಡ್ಸ್ ಕಲ್ಲಡ್ಕ ಮತ್ತು ಮಣಿಕಂಠ ಮಂದಿರ,
ಕುದ್ರೆಬೆಟ್ಟು ಈ ಸಂಘಸAಸ್ಥೆಗಳ ಸಹಕಾರದೊಂದಿಗೆ ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿದೆ.
ಆಸಕ್ತ ರಕ್ತದಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಪೋಷಕರು, ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಬಹುದು ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ















