ವೀರಕಂಭ: ಕಾಲು ಸಂಕದ ತಡೆಗೋಡೆ ಕುಸಿತ ತುರ್ತು ದುರಸ್ತಿಗೆ ಗ್ರಾಮಸ್ಥರ ಒತ್ತಾಯ.

Coastal Bulletin
ವೀರಕಂಭ: ಕಾಲು ಸಂಕದ ತಡೆಗೋಡೆ ಕುಸಿತ ತುರ್ತು ದುರಸ್ತಿಗೆ ಗ್ರಾಮಸ್ಥರ ಒತ್ತಾಯ.

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ಕುಮೇರು ಎಂಬಲ್ಲಿನ ಕಾಲು ಸಂಕದ ಬದಿಗೆ ಕಟ್ಟಿದ ತಡೆಗೋಡೆಯು ಬೆರ್ಪಟ್ಟು ವಿಪರೀತ ಮಳೆಗೆ ಜರಿದಿದ್ದು ಅಪಾಯದ ಸ್ಥಿತಿಯಲ್ಲಿದೆ.

ಈ ದಾರಿಯಲ್ಲಿ ವೀರಕಂಭದಿಂದ ಕುಮೇರು, ಕೆಮ್ಮಟೆ, ಲಾಡ, ಸಿಂಗೇರಿ,, ಕಿನ್ನಿ ಮೂಲೆ, ಗುಡ್ಡೆ ತೋಟ ಪ್ರದೇಶದ ಶಾಲಾ ಮಕ್ಕಳಿಗೆ, ದಿನನಿತ್ಯದ ಕೆಲಸ ಕಾರ್ಯ ಗಳಿಗೆ ತೆರಳುವ ಈ ಭಾಗದ

ಜನರಿಗೆ ಮುಖ್ಯ ಕಾಲುದಾರಿಯಾಗಿದ್ದು, ಈ ದಾರಿಯನ್ನೇ ಅವಲಂಬಿತರಾಗಿದ್ದಾರೆ, ತಡೆಗೋಡೆ ಜರಿದು ಬಿದ್ದು ಸಂಕ ಅಪಾಯ ಅಂಚಿನಲ್ಲಿ ಇರುವುದರಿಂದ ಅನಾಹುತ ಸಂಭವಿಸುವ ಮೊದಲೇ ಇದರ ತುರ್ತು ರಿಪೇರಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Comment