ಬಂಟ್ವಾಳ :ಅ.23 ರಿಂದ 26ರ ವರೆಗೆ ಬೆಳಗಾಂ ಶಿವಗಂಗಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸಿಬಿಎಸ್ಇ 1000ಮಿ. ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಿ.ಸಿ.ರೋಡ್ ನ ಡಾ.ಸಂತೋಷ್ ಬಾಬು ಮತ್ತು ಡಾ.ಸೌಮ್ಯ ಎಸ್ .ಜಿ. ರವರ ಪುತ್ರಿ ಕು.ಐಶಾನಿ ಸಂತೋಷ್ ರಜತ ಪದಕ ವಿಜೇತರಾಗಿದ್ದಾರೆ.
ಇವರು ನೀರುಮಾರ್ಗ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಈಕೆ ಬಿ.ಸಿ.ರೋಡ್ ಗುರುಕೃಪಾ ಪೆಟ್ರೋಲ್ ಪಂಪ್ ಮಾಲಕರಾದ ಸಂಜೀವ ಪೂಜಾರಿ ಮತ್ತು ಮಾಲತಿ ಸಂಜೀವ ಪೂಜಾರಿಯವರ ಮೊಮ್ಮಗಳು.