ಬಂಟ್ವಾಳ : ಕರಿಯಂಗಳ ಗ್ರಾಮದ ಪಲ್ಲಿಪಾಡಿ ಶ್ರೀ ಕೊಡಮಣಿತ್ತಾಯ, ಅಣ್ಣಪ್ಪ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವಗಳ ಚರಿತ್ರೆ, ಆಚರಣೆ ಮತ್ತು ಕ್ಷೇತ್ರ ಮಹಿಮೆಯನ್ನು ಒಳಗೊಂಡ ಪುಸ್ತಕವನ್ನು ಇತ್ತೀಚೆಗೆ ಪಲ್ಲಿಪಾಡಿ ಕೊಡಮಣಿತ್ತಾಯ-ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಗುತ್ತಿನವರಾದ ನರೇಶ್ ಪೂಂಜ ಅವರು ಪುಸ್ತಕ ಬಿಡುಗಡೆಗೈದು ಮಾತನಾಡಿ, ದೈವಗಳ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು. ಪ್ರಧಾನ ಅರ್ಚಕ ವೆಂಕಟೇಶ್ ತುಂಗ ಆಶೀರ್ವಚನ ನೀಡಿದರು. ಚಂದ್ರಹಾಸ ಪಲ್ಲಿಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪಲ್ಲಿಪಾಡಿಗೆ ದೈವಗಳೂ ಬಂದ ಬಗೆ, ಈ ಹಿಂದೆ ದೈವಸ್ಥಾನದಲ್ಲಿ
ಆರಾಧಿಸುತ್ತಿರುವ ದೈವಗಳ ಮಾಹಿತಿಯನ್ನು ಪ್ರಾಸ್ತಾವಿಕವಾಗಿ ಮಾತನಾಡಿ ತಿಳಿಸಿದರು.
ಪರಿಸರ ಪ್ರೇಮಿ ಹಾಗೂ ಪುಸ್ತಕ ಸಂಪಾದಕರಾದ ರಾಜಮಣಿ ರಾಮಕುಂಜ ಪುಸ್ತಕದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಶ್ರೀಧರ ಮೂಲ್ಯ, ಸುಂದರ ಮೂಲ್ಯ, ಶೇಖರ ಟಿ. ಅಂಚನ್, ಶ್ರೀಧರ ಆಚಾರ್ಯ ಉಪಸ್ಥಿತರಿದ್ದರು.
ಕಿಶೋರ್ ಪಲ್ಲಿಪಾಡಿ ಕಾರ್ಯಕ್ರಮ ನಿರೂಪಿಸಿದರು. ರಾಜ್ ಕೋಟ್ಯಾನ್ ಸ್ವಾಗತಿಸಿದರು.














