ಬಂಟ್ವಾಳ :ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತ ಇದರ ನೂತನ ಕಟ್ಟಡ "ಶ್ರೀ ನಂದ" ಉದ್ಘಾಟನಾ ಸಮಾರಂಭ ಪುದು ಗ್ರಾಮದ ಕಡೆಗೋಳಿ ಯಲ್ಲಿ ಜರಗಿತು. ಉದ್ಘಾಟನೆಯನ್ನು ಗೈದ ಮಂಗಳೂರು ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟರವರು ಮಾತನಾಡಿ ದೇಶದ ಪ್ರದಾನಿಯವರ ವಿಕಸಿತ ಭಾರತದ ಆಶಯದಂತೆ ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮೂಲಕ ಮಹಿಳಾ ಸಹಕಾರಿಗಳು ಸಬಲೀಕರಣಗೊಳ್ಳುತ್ತಿದ್ದಾರೆ . ಹಾಲು ಉತ್ಪಾದನೆಯಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡಿ ಮಹಿಳೆಯರು ಸ್ವಾವಲಂಬಿಗಳಾಗಲಿ, ಉತ್ತಮ ಸಹಕಾರಿ ಸಂಘವಾಗಲಿ ಎಂದು ಹಾರೈಸಿದರು.
ನೂತನ ಕಟ್ಟಡದ ಉದ್ಘಾಟನೆ ಯನ್ನು ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತ ಮಂಗಳೂರು ಇದರ ಅಧ್ಯಕ್ಷರಾದ ರವಿರಾಜ್ ಹೆಗ್ಡೆ , ಗೋದಾಮು ಉದ್ಘಾಟನೆಯನ್ನು ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತ ಮಂಗಳೂರು ವ್ಯವಸ್ಥಾಪನಾ ನಿರ್ದೇಶಕರಾದ ವಿವೇಕ ಡಿ , ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ಐಕಳ ಬಾವ ಡಾ ದೇವಪ್ರಸಾದ್ ಶೆಟ್ಟಿ ನೆರವೇರಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಕೆ ಪಿ ಸುಚರಿತ ಶೆಟ್ಟಿ ನಿರ್ದೇಶಕರು ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತ . ಬಿ ಸುಧಾಕರ ರೈ ನಿರ್ದೇಶಕರು ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತ. ಸವಿತಾ ಎನ್ ಶೆಟ್ಟಿ ನಿರ್ದೇಶಕರು ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತ. ನಂದರಾಮ್ ರೈ ನಿರ್ದೇಶಕರು ದ. ಕ ಜಿಲ್ಲಾ ಹಾಲು ಒಕ್ಕೂಟ ನಿಯಮಿತ. ಸ್ಕಾಡ್ಸ್ ಮಂಗಳೂರು
ಇದರ ಅಧ್ಯಕ್ಷರಾದ ರವೀಂದ್ರ ಕಂಬಳಿ , ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ . ಶ್ರೀ ನಾಗಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ಥಾನದ ಆಡಳಿತ ಮೊಕ್ತೇಸರರು ಭಾಸ್ಕರ ಚೌಟ ಕುಂಭ್ಡೇಲು , ತೃಪ್ತಿ ಕನ್ಸ್ಟ್ರಕ್ಷನ್ ಫರಂಗಿಪೇಟೆ ಯ ಟಿ ತಾರಾನಾಥ ಕೊಟ್ಟಾರಿ , ಉಪ ವ್ಯವಸ್ಥಾಪಕರು ಜಾನೆಟ್ ರೊಸಾರಿಯೋ , ವಿಸ್ತರಣಾಧಿಕಾರಿ ಜಗದೀಶ್ , ಹಾಲು ಪರೀಕ್ಷಕರು ಲಕ್ಷ್ಮಿ ನಾಣ್ಯ , ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತ ದ ಅಧ್ಯಕ್ಷರು ಹೇಮಲತಾ ಬಿ ಚೌಟ,ಉಪಾಧ್ಯಕ್ಷರು ಗೀತಾ ಗಂಪದಕೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸಹಕಾರಿಗಳನ್ನು ಸನ್ಮಾನಿಸಲಾಯಿತು
ಕಾರ್ಯನಿರ್ವಹಣಾದಿಕಾರಿ ಆಶಾ ಲತಾ ತುಂಬೆಕೋಡಿ ವರದಿ ವಾಚಿಸಿದರು ನಿರ್ದೇಶಕಿ ಶಾಂತ ಡಿ ಚೌಟ ಸ್ವಾಗತಿಸಿದರು , ಸುಜಾತಾ ಕಿದೆಬೆಟ್ಟು ವಂದಿಸಿ, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.














