ಆತ್ಮ ರಕ್ಷಣೆ ಒಂದು ಜೀವನ ಶೈಲಿ. ಯಾವಾಗಲೂ ಆತ್ಮ ರಕ್ಷಣೆ ನಮಗೆ ಸವಾಲು ಇದನ್ನು ಮೆಟ್ಟಿ ನಿಂತು ಮಹಿಳೆಯರು ಸ್ವ ರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಜೆಸಿಐ ಮಂಗಳೂರು ಸ್ಪೂರ್ತಿಯು ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ "ಸ್ವರಕ್ಷಾ ಮಹಿಳೆಯರಿಗಾಗಿ ಆತ್ಮರಕ್ಷಣಾ ಕಾರ್ಯಾಗಾರ"ವನ್ನು ಜೂನ್ 13ರಂದು ಸೋಮವಾರ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಊರ್ವಸ್ಟೋರ್ ನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಮಹೇಶ್ ಇಂಜಿನಿಯರಿಂಗ್ ನ ಮಾಲಕರದ ಜೆಸಿ ಮಹೇಶ್ ಕಾಮತ್ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಸ್ವರಕ್ಷಾ ವಿಮೆನ್ಸ್ ಟ್ರಸ್ಟ್ ನ
ಸಿ ಇ ಒ ಕಾರ್ತಿಕ್ ಎಸ್ ಕಟೀಲ್ ಭಾಗವಹಿಸಲಿದ್ದಾರೆ ಎಂದು ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷರಾದ ರಾಘವೇಂದ್ರ ಹೊಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















