ಹಾಸನ :ಹಾಸನದಲ್ಲಿ ತಾಯಿ ಮಗ ಇಬ್ಬರೂ ಸಹ ಪರೀಕ್ಷೆ ಬರೆದು ಒಟ್ಟಾಗಿ ಪಾಸ್ ಆಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.34 ವರ್ಷದ ತಾಯಿ ತೀರ್ಥಾ ಹಾಗೂ ಆಕೆಯ ಪುತ್ರ ಹೇಮಂತ್ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಕಲೆಶಪುರ ತಾಲೂಕಿನ ಲಕ್ಷ್ಮೀಪುರ ನಿವಾಸಿ ತೀರ್ಥಾ 8ನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದರು.ಈ ಬಾರಿ 10ನೇ ತರಗತಿ ಪರೀಕ್ಷೆ ಬರೆಯುವ ನಿರ್ಧಾರ ಮಾಡಿ ತನ್ನ ಮಗನ ಸ್ಟಡಿ ಮೆಟೀರಿಯಲ್ಸ್ ನ
ಓದಿಕೊಂಡೇ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.
ತಾಯಿ ತೀರ್ಥ ಲಾಂಗನಾಸ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದು 235 ಅಂಕ ಪಡೆದು ಪಾಸಾದ್ರೆ ಮಗ ಹೇಮಂತ್ ಶ್ರೀ ಮಾರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ 562 ಉತ್ತಮ ಅಂಕ ಪಡೆದಿದ್ದಾನೆ.
















