ಅಫ್ಘಾನಿಸ್ತಾನ : ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, 98 ಜನರಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ. ಸದ್ಯ ಕಾಬೂಲ್ ಏರ್ ಪೋರ್ಟ್ ನಲ್ಲಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಅಪ್ಘಾನಿಸ್ತಾನದಿಂದ ಭಾರತಕ್ಕೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಕಾಬೂಲ್ ಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರವೂ ಬಂದ್ ಆಗಿದೆ.
ಈ ಬಗ್ಗೆ ಉಕ್ರೇನ್ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಗೆ ಮಾಹಿತಿ ನೀಡಿ 'ಅಪಹರಣಕಾರರು ಬಂದೂಕುಧಾರಿಗಳಾಗಿದ್ದು, ಉಕ್ರೇನ್
ಜನರನ್ನು ಏರ್ ಲಿಫ್ಟ್ ಮಾಡುವ ಬದಲು ಕೆಲವು ಅಪರಿಚಿತ ಜನರೊಂದಿಗೆ ವಿಮಾನವನ್ನು ಹೈಜಾಕ್ ಮಾಡಿ ಇರಾನ್ ನತ್ತ ಹಾರಟ ನಡೆಸಲಾಗಿದೆ ಎಂದಿದ್ದಾರೆ.
ವಿಮಾನ ಕುರಿತಂತೆ ಮತ್ತು ಕಾಬೂಲ್ ನಲ್ಲಿನ ಉಕ್ರೇನ್ ಜನರನ್ನು ಮರಳಿ ಕರೆತರುವ ವ್ಯವಸ್ಥೆ ಏನಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.














