Coastal Bulletin

ಬಿಗಿಯಾದ ಬಟ್ಟೆ ಧರಿಸಿದ್ದಾಳೆ ಎಂಬ ಕಾರಣಕ್ಕೆ ಯುವತಿಯನ್ನು ತಾಲಿಬಾನಿಗಳು ಹತ್ಯೆಗೈದ ಘಟನೆ ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ನಡೆದಿದೆ.

ತಾಲಿಬಾನ್ ನಿಯಂತ್ರಣದಲ್ಲಿರುವ ಸಮರ್ ಖಂಡ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಯುವತಿಯನ್ನು ನಜಾನಿನ್ ಎಂದು ಗುರುತಿಸಲಾಗಿದೆ. ಮಹಿಳೆ ತನ್ನ ಮನೆಯಿಂದ ಹೊರಟು, ಮಜರ್-ಎ-ಶರೀಫ್‌ಗೆ ತೆರಳಲು ವಾಹನ ಹತ್ತುತ್ತಿರುವ

ಸಂದರ್ಭ ಗುಂಡು ಹಾರಿಸಲಾಗಿದೆ. ದಾಳಿ ಸಮಯದಲ್ಲಿ ನಜಾನಿನ್ ಬುರ್ಖಾ ಧರಿಸಿದ್ದರು.

ಆಕೆ ಬಿಗಿಯಾದ ಬಟ್ಟೆ ಧರಿಸಿದ್ದಳು ಜೊತೆಗೆ ಪುರುಷ ಇಲ್ಲದ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದಳು. ಆದ ಕಾರಣ ಆಕೆಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.

Leave a Comment