ಅಫ್ಘಾನಿಸ್ತಾನದ ಕ್ರೌರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಮುಸ್ಲಿಂ ಲೀಗ್ ಶಾಸಕ ಎಂ.ಕೆ. ಮುನೀರ್‌ಗೆ ತಾಲಿಬಾನ್-ಒಂದು ವಿಸ್ಮಯ ಎಂಬ ಹೆಸರಿನಲ್ಲಿ ಎರಡು ಬೆದರಿಕೆ ಪತ್ರ ಬಂದಿದೆ.
ಕೋಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಪ್ರದೇಶದಿಂದ ಈ ಪೋಸ್ಟ್ ಮಾಡಲಾಗಿದ್ದು ಪತ್ರದಲ್ಲಿ 'ಸಾಮಾಜಿಕ ಜಾಲತಾಣದಲ್ಲಿ ಇರುವ ಪೋಸ್ಟ್‌ನ್ನು ಡಿಲೀಟ್ ಮಾಡಲು 24 ಗಂಟೆಗಳ ಗಡುವು ನೀಡಲಾಗಿದೆ. ಈ ಸಮಯದಲ್ಲಿ ಪೋಸ್ಟ್ ಡಿಲೀಟ್ ಆಗದಿದ್ದರೆ ನಿಮ್ಮನ್ನೂ ನಿಮ್ಮ ಕುಟುಂಬವನ್ನು ಹುಡುಕಿ ಕೊಲ್ಲುತ್ತೇವೆ, 2010 ರಲ್ಲಿ ಧರ್ಮನಿಂದನೆ ಮಾಡಿದ
ಪ್ರೊ.ಟಿ.ಕೆ.ಜೋಸೆಫ್ ಕೈ ಕತ್ತರಿಸಲಾಗಿತ್ತು. ಅದೇ ಸ್ಥಿತಿ ನಿಮಗೂ ಬರಲಿದೆ ಎಂದು ಬೆದರಿಸಲಾಗಿದೆ.
ಈ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನೀರ್ 'ಬೆಳಗ್ಗೆ ಮನೆಗೆ ಒಂದು ಪತ್ರ, ಸಂಜೆ ಆಫೀಸಿಗೆ ಒಂದು ಪತ್ರ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ಪೋಸ್ಟ್ ಡಿಲೀಟ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.














