ಬೆಂಗಳೂರು: 2021ನೇ ಸಾಲಿನ ರಾಜ್ಯ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಿದ್ದಾರೆ
ಈ ಬಾರಿ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 99.9ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಓರ್ವ ವಿದ್ಯಾರ್ಥಿನಿ ಹೊರತು ಪಡಿಸಿ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಬಾರಿ 4.70,160 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡಲಾಗಿದೆ. A + 1,28.931 ವಿದ್ಯಾರ್ಥಿಗಳು, A ಗ್ರೇಡ್‌ನಲ್ಲಿ 2.50,317, ವಿದ್ಯಾರ್ಥಿಗಳು, ಬಿ ಗ್ರೇಡ್ ನಲ್ಲಿ 2,87,684 ವಿದ್ಯಾರ್ಥಿಗಳು, ಸಿ ಗ್ರೇಡ್‌ನಲ್ಲಿ
1.13.610 ಮಕ್ಕಳು ಪಾಸ್ ಆಗಿದ್ದಾರೆ.13 ಮಕ್ಕಳಿಗೆ ಮಾತ್ರ ಗ್ರೇಸ್ ಅಂಕ ನೀಡಲಾಗಿದೆ. 157 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿದ್ದಾರೆ. 289 ವಿದ್ಯಾರ್ಥಿಗಳು 625 ಕ್ಕೆ 623 ಮಾರ್ಕ್ಸ್ ಗಳಿಸಿದ್ದಾರೆ. ಹಾಗೇ ಇಬ್ಬರು 625 ಕ್ಕೆ 622 ಅಂಕಗಳನ್ನು ಪಡೆದಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆ ಪ್ರಥಮ, ಬಳ್ಳಾರಿ ಜಿಲ್ಲೆ ಕೊನೆ ಸ್ಥಾನ ಗಳಿಸಿದೆ.















