Coastal Bulletin

ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ, ಅಣ್ಣನೋರ್ವ ತನ್ನ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬೊಂಡಾಲ ಶಾಂತಿಗುಡ್ಡೆಯಲ್ಲಿ ನಡೆದಿದೆ.ಶಾಂತಿಗುಡ್ಡೆ ನಿವಾಸಿ ಸುಂದರ (30) ಕೊಲೆಯಾದ ವ್ಯಕ್ತಿ. ಅವರ ಅಣ್ಣ ರವಿ ಎಂಬಾತ ಕೊಲೆ ಮಾಡಿ ತಲೆ ಮೆರೆಸಿಕೊಂಡಿದ್ದಾನೆ.

ರವಿಯ ಮನೆಯ ಕೂಗಳತೆ ದೂರದಲ್ಲಿ ಕೊಲೆಯಾದ ಸುಂದರನ ಮನೆಯಿದ್ದು ಅವಿವಾಹಿತನಾಗಿ ಒಬ್ಬನೇ‌ ವಾಸಿಸುತ್ತಿದ್ದ.ರವಿಯ ಹೆಂಡತಿ ದಿನಾ ಸುಂದರನಿಗೆ ಊಟ ತಿಂಡಿ‌ ನೀಡುತ್ತಿದ್ದರು ಎನ್ನಲಾಗಿದೆ.

ತನ್ನ ಹೆಂಡತಿ ಜೊತೆ ಅನೈತಿಕ‌ ಸಂಬಂಧವಿದೆ ಎಂದು ಶಂಕಿಸಿ ರವಿ ಪದೇ ಪದೇ ಸುಂದರನೊಂದಿಗೆ ಜಗಳ ಮಾಡುತ್ತಾ ಇದ್ದ ಎನ್ನಲಾಗಿದೆ. ಶುಕ್ರವಾರ ತಡರಾತ್ರಿಯೂ ಅವರ ಮಧ್ಯೆ ಜಗಳ ನಡೆದಿದ್ದು ಸುಂದರನ

ಬೊಬ್ಬೆ ಕೇಳಿ ಅಲ್ಲೇ ಸಮೀಪದಲ್ಲಿ ವಾಸವಿರುವ ಮತ್ತೋರ್ವ ಅಣ್ಣ ರಮೇಶ ಬಂದು ನೋಡಿದಾಗ ರವಿಯು ಸುಂದರನಿಗೆ ಸಲಾಕೆಯಿಂದ ತಲೆಗೆ ಹೊಡೆದಿದ್ದು, ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆರೈಕೆ ಮಾಡುತ್ತಿದ್ದಂತೆ ಕೊನೆಯುಸಿರು ಎಳೆದಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 

ಅರೋಪಿ ರವಿ ತಲೆ ಮರೆಸಿಕೊಂಡಿದ್ದು ಬಂಟ್ವಾಳ ಪೋಲಿಸರು ಪ್ರಕರಣ ದಾಖಲಿಸಿ ಅರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Leave a Comment