ಕಾಂತಾರ 1 ಚಿತ್ರೀಕರಣದ ಡ್ಯಾನ್ಸರ್ಸ್‌ ಕರೆದೊಯ್ಯುತ್ತಿದ್ದ ವಾಹನ ಪಲ್ಟಿ, ಹಲವರಿಗೆ ಗಂಭೀರ ಗಾಯ

Coastal Bulletin
ಕಾಂತಾರ 1 ಚಿತ್ರೀಕರಣದ ಡ್ಯಾನ್ಸರ್ಸ್‌ ಕರೆದೊಯ್ಯುತ್ತಿದ್ದ ವಾಹನ ಪಲ್ಟಿ, ಹಲವರಿಗೆ ಗಂಭೀರ ಗಾಯ

ಕುಂದಾಪುರ : ಕಾಂತಾರ ಸಿನಿಮಾ (Kantara Movie) ಚಿತ್ರೀಕರಣದ ಡ್ಯಾನ್ಸರ್ (Dancers) ಕರೆದೊಯ್ಯುತ್ತಿರುವ ವಾಹನ ಪಲ್ಟಿಯಾಗಿದೆ. ಕುಂದಾಪುರ ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರು ಮಾರ್ಗದಲ್ಲಿ ಅಪಘಾತ (Accident) ನಡೆದಿದೆ. 25 ಜನ ಡ್ಯಾನ್ಸರ್ ಕರೆದೊತ್ತಿರುವ ವಾಹನ ಪಲ್ಟಿ ಆಗಿದ್ದು, ಹಲವರಿಗೆ ಗಾಯವಾಗಿದೆ. ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಕುಂದಾಪುರ (Kundapura) ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಲ್ಲೂರು ಹಾಲ್ಕಲ್ ಮಾರ್ಗದಲ್ಲಿ ಈ ಘಟನೆ‌ ಸಂಭವಿಸಿದೆ.

ಜಡ್ಕಲ್ ಮಹಾಲಕ್ಷ್ಮಿ ಕ್ಲಿನಿಕ್ ನಲ್ಲಿ ಹಲವರಿಗೆ ಚಿಕಿತ್ಸೆ ನೀಡಿಲಾಗುತ್ತಿದೆ. ಹಾಡಿನ ಚಿತ್ರೀಕರಣಕ್ಕಾಗಿ  ಜ್ಯೂನಿಯರ್‌‌ ಡ್ಯಾನ್ಸರ್ಸ್‌‌ ಬಂದಿದ್ದರು. ಇನ್ನು ನಾಲ್ಕು ದಿನಗಳ ಕಾಲ ಚಿತ್ರೀಕರಣ ಬಾಕಿ ಇತ್ತು ಎನ್ನಲಾಗಿದೆ. ಕುಂದಾಪುರ ಅಮಾವಾಸೆ ಬೈಲು ಸೇರಿದಂತೆ ಕರಾವಳಿ ಬಾಗದಲ್ಲಿ ಕಾಂತಾರಾ ಪೀಕ್ವೇಲ್ ಚಿತ್ರೀಕರಣ ನಡೆಯುತ್ತಿದೆ.

ವಾಹನ ಪಲ್ಟಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚಾಲಕನ ಮೇಲೆ ಚಿತ್ರೀಕರಣಕ್ಕೆ ಬಂದ ಆರ್ಟ್ ಹುಡುಗರು (Arts Boys) ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆರ್ಟ್ ಹುಡುಗರು ಚಾಲಕನ

ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಚಾಲಕನ ಸ್ಥಿತಿ ಗಂಭೀರವಾಗಿದೆ (Serious) ಎನ್ನಲಾಗಿದೆ. ಚಾಲಕ ನಿರ್ಲಕ್ಷ್ಯದಿಂದ ಗಾಡಿ ಚಲಾಯಿಸಿದ್ದಾನೆ ಎಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.  ಲೋಕಲ್ ಚಾಲಕನ ಮೇಲೆ ಹಲ್ಲೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ರಿಷಬ್ ಶೆಟ್ಟಿ ಮಧ್ಯವರ್ತಿ ವಹಿಸಿ ಸಂಧಾನ ಮಾಡಿದ್ದಾರೆ ಎನ್ನಲಾಗಿದೆ.ಅವರನ್ನು ಕರೆದು ಬುದ್ಧಿ ಹೇಳುತ್ತೇನೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ. ಮಿನಿ ಬಸ್‌‌‌‌‌‌‌ನಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ.

Leave a Comment