Coastal Bulletin

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಚಿತ್ರದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇನ್ನು ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ದರ್ಶನ್ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿದ್ದಾರೆ.

ಕಾಂತ್ರಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆಯನ್ನು ಬಳ್ಳಾರಿಯ ಹೊಸಪೇಟೆ ಪಟ್ಟಣದ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ಥದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿತ್ತು. 

ಕ್ರಾಂತಿ ಚಿತ್ರದ ಪೋಸ್ಟರ್ ಗಳನ್ನು ಅಪ್ಪು ಅಭಿಮಾನಿಗಳು ಹರಿದುಹಾಕಿದ್ದರು. ಅಲ್ಲದೆ ಅಪ್ಪು ಕಟ್ ಔಟ್ ಹಿಡಿದು ಅಪ್ಪುಗೆ ಜೈಕಾರ ಹಾಕಿ ವೇದಿಕೆ ಏರಿದ್ದರು. ಈ ವೇಳೆ ದರ್ಶನ್ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಕಾರ್ಯಕ್ರಮ ಶುರುವಾಯಿತು. 

ವೇದಿಕೆ ಮೇಲೆ ರಚಿತಾ ರಾಮ್ ಚಿತ್ರದ ಕುರಿತು ಮಾತನಾಡುತ್ತಿದ್ದಾಗ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಇತ್ತೀಚೆಗಷ್ಟೇ ಚಿತ್ರದ ʼಧರಣಿʼ ಎಂಬ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಈ ಸಂದರ್ಭದಲ್ಲಿ  ಸಂದರ್ಶನ ಒಂದರಲ್ಲಿ ನಟ ದರ್ಶನ ಹೇಳಿರುವ ಮಾತು ಹಿಂದೂ ಪರ ಸಂಘಟನೆ ಸೇರಿದಂತೆ ಕೆಲವು ಜನರ ಕೋಪಕ್ಕೆ ಗುರಿಯಾಗಿತ್ತು. ಅಲ್ಲದೆ, ದರ್ಶನ್‌ ಸಿನಿಮಾ

ಕ್ರಾಂತಿ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್ಕಾಟ್‌ ಸಿನೇಮಾ ಅಂತ ಭಾರೀ ಸುದ್ದಿಯಾಗಿತ್ತು.

ಸಂದರ್ಶನವೊಂದರಲ್ಲಿ ದರ್ಶನ್ ಅವರು, ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅಪರೂಪ, ಅಂತಹ ಸಮಯ ಬಂದ್ರೆ ಅದೃಷ್ಟ ದೇವತೆಯನ್ನು ಬೆಡ್‌ ರೂಮ್‌ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಕೂರಿಸಿಬಿಡಬೇಕು ಎಂದು ಹೇಳಿದ್ದರು. ಅವರು ಹೇಳಿದ್ದರ ಉದ್ದೇಶವೇ ಬೆರೆಯಾಗಿತ್ತು. ಅಂದ್ರೆ ಒಳ್ಳೆಯ ಅವಕಾಶ ಒಂದಾಗ ಅದರ ಉಪಯೋಗ ಪಡೆಯಬೇಕು ಅಂತ ಅರ್ಥ. ಆದ್ರೆ ಅವರು ಹೇಳಿದ ವಿಧಾನ ಕೆಲವರ ಮನಸ್ಸಿಗೆ ನೋವು ಉಂಟು ಮಾಡಿದೆ. ಇನ್ನು ಟ್ಟಿಟರ್‌ನಲ್ಲಿ ದರ್ಶನ್ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.

ಹಲವಾರು ನೆಟ್ಟಿಗರು ದರ್ಶನ್ ವಿರುದ್ಧ ಕಿಡಿಕಾರಿದ್ದರೆ. ಅದೃಷ್ಟ ದೇವತೆ ಅಂದ್ರೆ ಮಹಾಲಕ್ಷ್ಮಿ, ದರ್ಶನ್ ಅವರ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ʼಅದೃಷ್ಟ ದೇವತೆಯನ್ನು ಮನೆಯ ಬೆಡ್ ರೂಮನಲ್ಲಿ ಕುಳ್ಳಿರಿಸಿ, ಬಿಟ್ಟೆ ಬಿಚ್ಚಬೇಕು ಎಂದು ಹೇಳಿ ಕೊಟ್ಯಾಂತರ ಹಿಂದೂ ಮಾತೆಯರು ಅತ್ಯಂತ ಭಕ್ತಿ ಭಾವದಿಂದ ಪೂಜೆ ಮಾಡುವ ದೇವತೆಗಳ ಅಪಮಾನ ಅಲ್ಲವೇ?.ʼ ಎಂದು ಕಿಡಿಕಾರಿದ್ದಾರೆ.

Leave a Comment