ಭಾನುವಾರ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪ 2

Coastal Bulletin
ಭಾನುವಾರ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪ 2

'ಪುಷ್ಪ 2’ ಚಿತ್ರ ಭಾರತ ಹಾಗೂ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದವರಿಗೆ ಸಿನಿಮಾ ಸಖತ್ ಇಷ್ಟ ಆಗುತ್ತಿದೆ. ಹೀಗಾಗಿ, ಇಲ್ಲಿಗಿಂತ ಅಲ್ಲಿಯೇ ಹೆಚ್ಚು ಗಳಿಕೆ ಆಗುತ್ತಿದೆ. ಭಾನುವಾರ (ಡಿಸೆಂಬರ್ 8) ಬಾಕ್ಸ್​ ಆಫೀಸ್​ನಲ್ಲಿ ಮಹಾ ಪ್ರಳಯವೇ ನಡೆದು ಹೋಗಿದೆ. ಗಳಿಕೆ ನೋಡಿ ಬಾಲಿವುಡ್​ ಮಂದಿಯೂ ಅಚ್ಚರಿಗೊಂಡಿದ್ದಾರೆ.

ಹಿಂದಿ ಚಿತ್ರಗಳೇ ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗಿರುವಾಗ ತೆಲುಗು ಸಿನಿಮಾ ಒಂದು ಬಾಲಿವುಡ್​ನಲ್ಲಿ ಪಾರುಪತ್ಯ ನಡೆಸಿದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಹಾಗೂ ‘ಪಠಾಣ್​’ ಚಿತ್ರದ ದಾಖಲೆಗಳನ್ನು ಈ ಸಿನಿಮಾ ನೆಲಸಮ ಮಾಡಿದೆ. ಇದು, ‘ಪುಷ್ಪರಾಜ್​’ನ ತಾಕತ್ತನ್ನು ತೋರಿಸುತ್ತದೆ. ಈ ಸಿನಿಮಾದ ಗಳಿಕೆ ನಿತ್ಯ ನೂರು ಕೋಟಿ ರೂಪಾಯಿ ಮೇಲೆಯೇ ಇದೆ.

ಗುರುವಾರ (ಡಿಸೆಂಬರ್ 5) ಈ ಚಿತ್ರ175 ಕೋಟಿ ರೂಪಾಯಿ ಗಳಿಸಿತು. ಶುಕ್ರವಾರ (ಡಿಸೆಂಬರ್ 6) 93.8 ಕೋಟಿ ರೂಪಾಯಿ, ಶನಿವಾರ (ಡಿಸೆಂಬರ್ 7) 119 ಕೋಟಿ ರೂಪಾಯಿ ಗಳಿಸಿತ್ತು. ಭಾನುವಾರ ಈ ಚಿತ್ರ 141 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಲೆಕ್ಕಾಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ. ಅದರಲ್ಲೂ ಬಾಲಿವುಡ್​ನಲ್ಲಿ ಈ ಚಿತ್ರ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಈ

ಮೂಲಕ ಮೊದಲ ವಾರವೇ ಈ ಚಿತ್ರ ಭಾರತದಲ್ಲಿ 529 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ವಿಶೇಷ ಎಂದರೆ ಮೊದಲ ಭಾನುವಾರ ‘ಪುಷ್ಪ 2’ ಚಿತ್ರ ಹಿಂದಿಯಲ್ಲಿ ಸುಮಾರು 83 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಹಿಂದೆ ಜವಾನ್ ಸಿನಿಮಾ 80 ಕೋಟಿ ರೂಪಾಯಿ ಗಳಿಕೆ ಮಾಡಿ ಮೊದಲ ಭಾನುವಾರದ ಕಲೆಕ್ಷನ್​ನಲ್ಲಿ ಅಗ್ರಸ್ಥಾನದಲ್ಲಿ ಇತ್ತು. ಆ ದಾಖಲೆಯನ್ನು ಚಿತ್ರ ಪುಡಿ ಮಾಡಿದೆ.

ಇನ್ನು, ಹಿಂದಿ ಬೆಲ್ಟ್​ನಲ್ಲಿ ಮೊದಲ ವಾರದ ಗಳಿಕೆ ವಿಚಾರದಲ್ಲೂ ‘ಪುಷ್ಪ 2’ ಮೇಲುಗೈ ಸಾಧಿಸಿದೆ. ಈ ಚಿತ್ರ ಮೊದಲ ಭಾನುವಾರ 285 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ದಾಖಲೆ ಬರೆದಿದೆ. ಇಂದು (ಡಿಸೆಂಬರ್ 9) ಸೋಮವಾರ. ಸಿನಿಮಾ ಎಷ್ಟು ಕೋಟಿ ಗಳಿಕೆ ಮಾಡುತ್ತದೆ ಎಂಬುದರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.

Leave a Comment