ಸಂದೀಪ್ ಸಾಲ್ಯಾನ್

ಬಂಟ್ವಾಳ: ಪ್ರತಿಯೊಬ್ಬ ವ್ಯಕ್ತಿಗೂ ಮದುವೆ ಅವರ ಜೀವನನದ ಅವೀಸ್ಮರಣಿಯ ಕ್ಷಣ. ಮದುವೆಯನ್ನು ಸ್ಮರಣೀಯವಾಗಿಸಲು ಹಲವರು ಹಲವು ರೀತಿಯ ವೈಶಿಷ್ಯತೆಗಳನ್ನು ಮಾಡಿಕೊಳ್ಳುತ್ತಾರೆ. ಕೆಲವರ ವಿವಾಹದ ಆಮಂತ್ರಣ ಪತ್ರಗಳಂತೂ ಚಿತ್ತಾಕರ್ಷಕವಾಗಿರುತ್ತದೆ. ಪರಿಸರ ಪ್ರೇಮಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಮಣಿ ರಾಮಕುಂಜ ಅವರ ಮಗಳು ಮೇಧಾ ರಾಮಕುಂಜ ಹಾಗೂ ರಂಜನ್ ಆಚಾರ್ಯ ಮದುವೆಯ ಆಮಂತ್ರಣ ಪತ್ರ ಹಲವು ವೈಶಿಷ್ಠ್ಯಯೆಗಳೊಂದಿಗೆ ಗಮನ ಸೆಳೆಯುತ್ತಿದೆ. ಪರಿಸರ ಪ್ರೀತಿಯೊಂದಿಗೆ ಪ್ಲಾಸ್ಟಿಕ್ ಅಪಾಯದ ಕುರಿತು ಜಾಗೃತಿಯನ್ನು ಮದುವೆ ಆಮಂತ್ರಣದಲ್ಲಿ ಮುದ್ರಿಸಿ ಬಂಧುಗಳಿಗೆ ಹಂಚಿದ್ದಾರೆ. ಮಗಳು ಮಾತ್ರವಲ್ಲ ಅವರ ಕಾಲೇಜು ವಿದ್ಯಾರ್ಥಿನಿಯೂ ಕೂಡ ಇದೇ ಮಾದರಿಯಲ್ಲಿ ತನ್ನ ವಿವಾಹದ ಆಮಂತ್ರಣ ಪತ್ರವನ್ನು ಮುದ್ರಿಸಿ ಗುರುವಿನ ಪರಿಸರ ಪ್ರೀತಿಯನ್ನು ಅನುಕರಿಸಿದ್ದಾರೆ.

ನಿಮ್ಮಿಂದ ಗಿಡವಾಗಲಿ..

ವೀಳ್ಯದೆಲೆ ಮಾದರಿಯ ಆಮಂತ್ರಣ ಪತ್ರ ಆಕರ್ಷಣೀಯವಾಗಿದೆ. ಮೇಲ್ಬಾಗದಲ್ಲಿ ವಧು ವರರ ಭಾವಚಿತ್ರ ಗಮನ ಸೆಳೆದರೆ ಆಮಂತ್ರಣ ಪತ್ರ ತೆತರೆಯುತಿದ್ದಂತೆಯೇ ಒಳಪುಟದಲ್ಲಿರುವ ನಿಮ್ಮಿಂದ ಗಿಡವಾಗಲಿ ಎನ್ನುವ ಉಕ್ತಿಯಡಿಯಲ್ಲಿ ತರಕಾರಿ ಬೀಜಗಳನ್ನು ಇಡಲಾಗಿದೆ. ಬದನೆ, ಬೆಂಡೆ, ಅಲಸಂಡೆ, ಅರಿವೆ ಬೀಜಗಳಿದ್ದು ಪರಿಸರ ಪ್ರೀತಿಯನ್ನು ಅಭಿವ್ಯಕ್ತಗೊಳಿಸಲಾಗಿದೆ. ಮದುವೆಯಲ್ಲಿ ಶಾಸ್ತ್ರ ಹಾಗೂ ಊಟೋಪಚಾರ ಅತ್ಯಂತ ಪ್ರಮುಖವಾದುದು. ಆದರೆ ಅದನ್ನು ನಿರ್ವಹಿಸಿದವರು ಯಾರು ಎನ್ನುವುದು ಮದುವೆಗೆ ಬಂದವರಿಗೆ ತಿಳಿದಿರುವುದಿಲ್ಲ. ಮೇಧ- ರಂಜನ್ ಮದುವೆ ಆಮಂತ್ರಣದಲ್ಲಿ ಪುರೋಹಿತರು ಹಾಗೂ ಪಾಕಶಾಲ ನೇತೃತ್ವ ವಹಿಸಿದವರ ಹೆಸರನ್ನು ಉಲ್ಲೇಖಿಸಲಾಗಿದೆ. ಆಶೀರ್ವಾದವೇ ಉಡುಗೊರೆ ಎನ್ನುವ ಬದಲಾಗಿ, ಬೇಕು ನಮಗೆ ಆಶೀರ್ವಾದ, ಬೇಡ ನಮಗೆ ಉಡುಗೊರೆ ಎನ್ನುವ ವಾಕ್ಯ ಗಮ,ನ ಸೆಳೆಯುತ್ತದೆ. ಇನ್ನೂ ಆಮಂತ್ರಣದ ಕೊನೆಯ ಪುಟದಲ್ಲಿ ಪ್ಲಾಸ್ಟಿಕ್ ನಿಂದಾಗುವ ಅಪಾಯ, ಪರಿಸರ ಜಾಗೃತಿಯ ಮಾಹಿತಿಯನ್ನು ಮುದ್ರಿಸಲಾಗಿದೆ. ಮುದವೆ ಆಮಂತ್ರಣ ತಲುಪಿದ ಪ್ರತೀ ಮನೆಗೂ ಪ್ಲಾಸ್ಟಿಕ್ ಜಾಗೃತಿಯ ಮಾಹಿತಿ ಹಾಗೂ ತರಕಾರಿ ಬೀಜಗಳು ತಲುಪಿದೆ. ಈ ಮೂಲಕ ಮದುವೆ ಆಮಂತ್ರದಲ್ಲಿ ಪರಿಸರ ಜಾಗೃತಿ ಮೂಡಿಸಲಾಗಿದೆ. ಈಗಾಗಲೇ ಹಲವು ಮಂದಿ ಬಂಧುಗಳ

ಮನೆಯಲ್ಲಿ ತರಕಾರಿ ಬೀಜಗಳು ಮೊಳಕೆಯೊಡೆದು ಗಿಡವಾಗಿದೆ.


ವಿವಾಹ ವೈಶಿಷ್ಠ್ಯತೆ:

ಪ್ಲಾಸ್ಟುಕ್ ಬಳಕೆಯಿಂದ ಅಪಾಯದ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಶಾಲೆ, ಕಾಲೇಜು ಮತ್ತಿತರ ಕಡೆಗಳಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ರಾಜಮಣಿ ರಾಮಕುಂಜ ಆಯೋಜನೆಯ ಕಾರ್ಯಕ್ರಮಗಳು ಪ್ಲಾಸ್ಟಿಕ್ ಮುಕ್ತವಾಗಿರುತ್ತದೆ. ಡಿ. ೧೪ರಂದು ನಡೆಯುವ ಮಗಳ ಮದುವೆಯೂ ಪ್ಲಾಸ್ಟಿಕ್ ಮುಕ್ತವಾಗಿರಬೇಕೆನ್ನುವುದು ಅವರ ಕನಸು. ಈ ಸಂದರ್ಭ ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ರಾಷ್ಟ್ರ ಭಕ್ತಿ ಉದ್ದೀಪನಗೊಳಿಸುವ ದೃಷ್ಟಿಯಿಂದ ಬಟ್ಟೆಚೀಲ ವಿತರಣೆ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಮತ್ತು ತುಳಸೀ ಗೌಡ ಹಾಗೂ ಅವರ ಸಂಗಡಿಗರು ಜತೆಯಲ್ಲಿ ಸಿದ್ದಿ ಜನಾಂಗದವರು ಮೇಧಾಳ ಮದುವೆಯಲ್ಲು ಭಾಗವಹಿಸಲಿದ್ದಾರೆ.

ಗುರುವನ್ನು ಅನುಕರಿಸಿದ ಶಿಷ್ಯೆ:

ಪ್ರೋ ರಾಜಮಣಿ ರಾಮಕುಂಜ ಅವರ ಕಾಲೇಜು ವಿದ್ಯಾರ್ಥಿನಿ ರಾಜಶ್ರೀ ಅವರ ವಿವಾಹವಿ ಅಶ್ವಿನ್ ಕುಮಾರ್ ಜೊತೆ ಫೆ.೧೦ ರಂದು ನಡೆಯಲಿದೆ. ಗುರುವಿನ ಹಾದಿಯನ್ನೇ ಅನುಕರಿಸಿರುವ ರಾಜಶ್ರೀ ಅವರು ತಮ್ಮ ಮದುವೆಯ ಆಮಂತ್ರಣದಲ್ಲಿ ಆಹಾರ ಪದಾರ್ಥ ವ್ಯರ್ಥ ಮಾಡದಂತೆ ಜಾಗೃತಿಯನ್ನು ಮೂಡಿಸಿದ್ದಾರೆ. ಜೊತೆಗೆ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ನೀಡಿದ್ದಾರೆ

Leave a Comment