ಯುನೈಟೆಡ್ ಕಿಂಗ್‌ಡಂನಿಂದ ಮಂಗಳೂರಿಗೆ ಬ್ಲ್ಯಾಕ್ ಫಂಗಸ್ ಔಷಧ:ಮಂಗಳೂರು ನಗರ ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು ನಡೆಸಿದ ವಿಶೇಷ ಪ್ರಯತ್ನ
ಬ್ಲ್ಯಾಕ್ ಫಂಗಸ್ ಸೋಂಕಿಗೆ ಮಂಗಳೂರಿನಲ್ಲಿ ಔಷಧದ ಕೊರತೆ ಇರುವುದನ್ನು ಮನಗಂಡ ಮಂಗಳೂರು ನಗರ ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರು ನಡೆಸಿದ ವಿಶೇಷ ಪ್ರಯತ್ನದ ಫಲವಾಗಿ ಯುನೈಟೆಡ್ ಕಿಂಗ್‌ಡಂನಿಂದ ಮಂಗಳೂರಿಗೆ ಬ್ಲ್ಯಾಕ್ ಫಂಗಸ್ ಔಷಧ ತಲುಪಿದೆ.
ಅಸೋಸಿಯೇಶನ್ ಆಫ್ ಓರಲ್ ಆಂಡ್ ಮ್ಯಾಕ್ಸಿಲೊಫೆಶಿಯಲ್ ಸರ್ಜನ್ಸ್ ಆಫ್ ಇಂಡಿಯಾ (ಎಒಎಂಎಸ್‌ಐ) ಸಂಘಟನೆಯ ಮಾಜಿ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಬೊನಂತಾಯ ಹಾಗೂ ಡಾ.ಬದ್ರಿ
ಅವರು ಯುನೈಟೆಡ್ ಕಿಂಗಡಂನಿಂದ ಬ್ಲ್ಯಾಕ್ ಫಂಗಸ್‌ಗೆ ಬೇಕಾಗಿರುವ ಆಂಫೊಟೆರಿಸಿನ್ ಔಷಧವನ್ನು ಭಾರತಕ್ಕೆ ತರಿಸಿದ್ದು ಅದನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರಿಗೆ ಮಂಗಳವಾರ ಹಸ್ತಾಂತರಿಸಲಾಯಿತು. ಎಒಎಂಎಸ್‌ಐ ಅಧ್ಯಕ್ಷ ಡಾ.ಮಂಜುನಾಥ ರೈ, ಮಾಜಿ ಅಧ್ಯಕ್ಷ ಡಾ.ಮುಸ್ತಫಾ ಖಾದರ್ ಉಪಸ್ಥಿತರಿದ್ದರು.
ಡಾ. ವೈ. ಭರತ್ ಶೆಟ್ಟಿ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ನಿರಂತರ ಸಂವಹನ ನಡೆಸಿದ ಪ್ರಯತ್ನ ಆಡಳಿತಾತ್ಮಕ ಕಾರ್ಯಗಳು ಸುಗಮವಾಗಿ ನಡೆದು ಔಷಧ ಮಂಗಳೂರಿಗೆ ತಲುಪಲು ಸಹಕಾರಿಯಾಯಿತು.















