Coastal Bulletin

ಬೆಂಗಳೂರು : "ನಾನು ಅವನಲ್ಲ ಅವಳು " ಚಿತ್ರದ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ತಲೆ ಹಾಗೂ ಬಲತೊಡೆಗೆ ಗಂಭೀರ ಪೆಟ್ಟು ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ.

ಬೈಕ್ ನಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮೆದುಳಿನ ಭಾಗದಲ್ಲಿ ತೀವ್ರವಾಗಿ ರಕ್ತಸ್ರಾವವಾದ ಪರಿಣಾಮ  ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ನಟ ವಿಜಯ್  ಪರಿಸ್ಥಿತಿ ಚಿಂತಾಜನಕವಾಗಿದ್ದು ಬನ್ನೇರು ಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೆದುಳಿನ ಆಪರೇಶನ್ ಮಾಡಲಾಗಿದೆ.ತೊಡೆ ಮೂಳೆಯ ಶಸ್ತ್ರಚಿಕಿತ್ಸೆ ಕೂಡ ಮಾಡಬೇಕಿದೆ.

ಇನ್ನು 48 ಗಂಟೆಗಳ ಕಾಲ ಏನೂ ಹೇಳಲಾಗದು. ಮೆದುಳಿಗೆ ಹೊಡೆತ ಬಿದ್ದಿದೆ,  ಇನ್ನೂ ವಿಜಯ್ ಅವರಿಗೆ ಪ್ರಜ್ಞೆ ಬಂದಿಲ್ಲ. ವೆಂಟಿಲೇಟರ್‌ ಸಪೋರ್ಟ್‌ನಲ್ಲಿದ್ದಾರೆ. ಉಸಿರಾಟ, ಹೃದಯ ಬಡಿತ ಎಲ್ಲವೂ ಸರಿಯಾಗಿದೆ, ಮೆದುಳಿಗೆ ಮೇಜರ್ ತೊಂದರೆಯಾಗಿದೆ" ಎಂದು ವೈದ್ಯ ಡಾ ಅರುಣ್ ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Comment