Coastal Bulletin

ಕೊಹಿಸ್ತಾನ : ಭಯೋತ್ಪಾದಕರು ನಡೆಸಿದ ಭೀಕರ ಉಗ್ರದಾಳಿಗೆ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 9 ಮಂದಿ ಚೀನಾದ ಕಾರ್ಮಿಕರು ಮತ್ತು ಪಾಕಿಸ್ತಾನ ಇಬ್ಬರು ಸೈನಿಕರು ಸೇರಿ 13 ಮಂದಿ ಮೃತಪಟ್ಟ ಘಟನೆ ವಾಯುವ್ಯ ಪಾಕಿಸ್ತಾನದಲ್ಲಿ ನಡೆದಿದೆ.ಬಸ್​ ಮೇಲೆ ಐಇಡಿ (IED) ದಾಳಿಯಾಗಿ ಸ್ಫೋಟಗೊಂಡಿದೆ ಎನ್ನಲಾಗಿದೆ.

ಸರ್ಕಾರಿ ಅಧಿಕಾರಿಯೊಬ್ಬರ ಮಾಹಿತಿಯ ಪ್ರಕಾರ ಚೀನಾದ ಎಂಜಿನಿಯರ್‌ಗಳು, ಸರ್ವೇಯರ್‌ಗಳು ಮತ್ತು ಮೆಕ್ಯಾನಿಕಲ್ ಸಿಬ್ಬಂದಿ ಸೇರಿದಂತೆ ಒಟ್ಟು 30 ಮಂದಿಯನ್ನು ಕೊಹಿಸ್ತಾನ ಜಿಲ್ಲೆಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಿಂಧೂ ನದಿಗೆ ನಿರ್ಮಾಣವಾಗುತ್ತಿರುವ ದಾಸು ಅಣೆಕಟ್ಟು ನಿರ್ಮಾಣಕಾರ್ಯ ನಡೆಸುತ್ತಿರುವ ಸ್ಥಳಕ್ಕೆ ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು,ಸ್ಫೋಟದಿಂದ

ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಬಸ್ ಕಂದಕಕ್ಕೆ ಬಿದ್ದಿತು.ಚೀನಾದ ಇನ್ನೂ 28 ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.


ಇದು ಭಾರಿ ಸ್ಫೋಟವಾಗಿದೆ ಆದರೆ ಸ್ಫೋಟದ ಸ್ವರೂಪ ಇನ್ನೂ ತಿಳಿದುಬಂದಿಲ್ಲ ಬಸ್ ನೊಳಗೆ ಅಥವಾ ರಸ

Leave a Comment