ಕೇರಳ ಕಾಸರಗೋಡಿನಿಂದ ಶೌಚಾಲಯದ ತ್ಯಾಜ್ಯ ಆಸ್ಪತ್ರೆ ತ್ಯಾಜ್ಯವನ್ನು ಕರ್ನಾಟಕ ವಾಹನ ಮೂಲಕ ಕರ್ನಾಟಕಕ್ಕೆ ತಂದು ನಿರ್ಜನ ಪ್ರದೇಶದಲ್ಲಿ ಸುರಿದು ಹೋಗುತ್ತೀರುವ ದಂಧೆಯನ್ನು ಕಲ್ಲಡ್ಕ ಕಾಂಞಂಗಾಡು ಹೆದ್ದಾರಿಯ ಉಕ್ಕುಡದಲ್ಲಿ ಸಾರ್ವಜನಿಕರು ಬುಧವಾರ ಪತ್ತೆ ಹಚ್ಚಿದ್ದಾರೆ.
ಜು.27 ರಂದು ಕೇಪು ಗ್ರಾಮದ ಕುದ್ದುಪದವಿನ ಖಾಸಗಿ ಜಾಗವೊಂದರಲ್ಲಿ ತೋಡಿಗೆ ತ್ಯಾಜ್ಯ ನೀರು ಬಿಡುತ್ತಿದ್ದ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯಿತಿಯವರು ದಾಳಿ ನಡೆಸಿ ಪೊಲೀಸ್ ವಶಕ್ಕೆ ನೀಡುವ ಕಾರ್ಯ ಮಾಡಿದ್ದರು. ಗ್ರಾಮ
ಪಂಚಾಯಿತಿ ವಿಶೇಷ ಅಧಿಕಾರವನ್ನು ಬಳಸಿ ಸುಮಾರು 50 ಸಾವಿರ ದಂಡವನ್ನು ವಿಧಿಸಿತ್ತು.
ಶೌಚಾಲಯದ ತ್ಯಾಜ್ಯ ರಸ್ತೆಯುದ್ದಕ್ಕೂ ಸೋರಿಕೆಯಾಗಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ತ್ಯಾಜ್ಯವನ್ನು ತಂದಿರುವುದಾಗಿ ಚಾಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.















