ಬಂಟ್ವಾಳ : ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ. ಆದರೆ ನೀರಪಾದೆ ಶಾಲೆಯ ಮಕ್ಕಳು ಸ್ವಾತಂತ್ಯೋತ್ಸವ ಕಾರ್ಯಕ್ರಮ ಮುಗಿಸಿ ನೇರವಾಗಿ ಗದ್ದೆಗೆ ಇಳಿದರು. ಭತ್ತ ಎಂದರೇನು, ಭತ್ತದ ತಳಿ, ನಾಟಿ, ಫಸಲು ಎಲ್ಲಾ ವಿಚಾರದ ಬಗ್ಗೆಯೂ ಮಕ್ಕಳು ಶಿಕ್ಷಕರು ಹಾಗೂ ರೈತರಿಂದ ಮಾಹಿತಿ ಪಡೆದರು. ಜೊತೆಗೆ ತಾವೂ ನಾಟಿ ಮಾಡಿದರು.
ದ. ಕ. ಜಿ. ಪ. ಹಿ. ಪ್ರಾಥಮಿಕ ಶಾಲೆ, ನೀರಪಾದೆ, ಬಾಳ್ತಿಲ, ಬಂಟ್ವಾಳ ತಾಲೂಕು ಇದರ ವಿದ್ಯಾರ್ಥಿಗಳು ದೇಶದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಕೋರ್ಯ ಯಾದವ ಬಂಗೇರ ಇವರ ಭತ್ತದ ಗದ್ದೆಯಲ್ಲಿ ಮೀಟರ್ ತಳಿಯ ಭತ್ತ ನೇಜಿ ನಾಟಿ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಾಪಕರಾದ ಸಂತೋಷ್, ಶಿಕ್ಷಕಿಯರಾದ ರೇಶ್ಮಾ, ಹೇಮಾವತಿ, ಮೋಕ್ಷ,ಚಿತ್ರತಾಲೂಕು ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ, ಶಾಲಾ
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಕೋರ್ಯ, ಶಾಲಾ ಅಭಿವೃದ್ಧಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ವಸಂತ ಸಾಲಿಯಾನ್, ಕೃಷಿಕರಾದ ಕೂಸಪ್ಪ ಪೂಜಾರಿ ಮೊಟ್ಟಿ ಕಲ್ಲು, ಸುರೇಂದ್ರ ಕೋರ್ಯ,ಎಸ್ ಡಿ ಎಂ ಸಿ ಸದಸ್ಯರಾದ ಪ್ರಶಾಂತ್,ಫಾರೂಕ್,ಪ್ರಗತಿಪರ ಯುವ ಕೃಷಿಕ ನಿತಿನ್,ನಿತೀಶ್, ಪ್ರವೀಣ್ ಬರಿಮಾರ್,30ಕ್ಕೂ ಹೆಚ್ಚು ಶಾಲಾ ಮಕ್ಕಳು, ಪೋಷಕರು, ಶಿಕ್ಷಕ ವೃಂದ ಮತ್ತಿತರರು ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೇಜಿ ಕೀಳುವುದು ಹಾಗೂ ನೇಜಿ ನಾಟಿಯ ಪ್ರಾಯೋಗಿಕ ಅನುಭವ ಪಡೆದುಕೊಂಡರು.
















