ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದಾಖಲೆ ನಿರ್ಮಿಸಿದ್ದಾರೆ. ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿನ್ ಶಿಪ್‌ನ ಫೈನಲ್ ನಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
88.17 ಮೀಟರ್ ದೂರ ಜಾವೆಲಿನ್ ಎಸೆದ ನೀರಜ್, ವಿಶ್ವ ಚಾಂಪಿಯನ್ ಶಿಪ್ ವಶಪಡಿಸಿಕೊಂಡು ಇತಿಹಾದ ಸೃಷ್ಟಿಸಿದ್ದಾರೆ. ಇದರೊಂದಿಗೆ ವಿಶ್ವ ಚಾಂಪಿಯನ್ ಶಿಪ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ನೀರಜ್ ಪಾತ್ರರಾಗಿದ್ದಾರೆ. ಆಗಸ್ಟ್ 27 ರ ಭಾನುವಾರ ತಡರಾತ್ರಿ ನಡೆದ ಜಾವೆಲಿನ್ ಪೈನಲ್‌ನಲ್ಲಿ ನೀರಜ್ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇತ್ತು.
ಆ ನಿರೀಕ್ಷೆಯನ್ನು ಹುಸಿಗೊಳಿಸದ ನೀರಜ್ ಭಾರತಕ್ಕೆ ಬಂಗಾರದ ಕೊಡುಗೆ ನೀಡಿದರು.
ನಾನು 90 ಮೀಟರ್ ದೂರ ಜಾವೆಲಿನ್ ಎಸೆಯುವುದು ನನ್ನ ಗುರಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇಂದು ಕೂಡ ಅದಕ್ಕೆ ಪ್ರಯತ್ನಿಸಿದೆ. ಆದರೆ ಅದು ಆಗಿಲ್ಲ. ಸದ್ಯಕ್ಕೆ 90 ಮೀಟರ್‌ಗಿಂತ ಚಿನ್ನದ ಪದಕವೇ ಮುಖ್ಯ ಎನಿಸುತ್ತಿದೆ. ಮುಂದೆ ಸಾಕಷ್ಟು ಪೈಪೋಟಿ ಇದೆ, 90 ಮೀಟರ್ ಗುರಿ ದಾಟುತ್ತೇನೆ ಎಂದು ನೀರಜ್ ಹೇಳಿದರು.















