ಕಾರ್ಮಿಕನಿಗೆ ಗುದ್ದಿದ ರಚಿತಾರಾಮ್ ಕಾರು- ಕಾರ್ಮಿಕನನ್ನು ಮನೆಗೆ ಕರೆಸಿ ಕ್ಷಮೆ ಯಾಚಿಸಿದ ನಟಿ.

Coastal Bulletin
ಕಾರ್ಮಿಕನಿಗೆ ಗುದ್ದಿದ ರಚಿತಾರಾಮ್ ಕಾರು- ಕಾರ್ಮಿಕನನ್ನು ಮನೆಗೆ ಕರೆಸಿ ಕ್ಷಮೆ ಯಾಚಿಸಿದ ನಟಿ.

ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ನಗರದ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ನಟಿ ರಚಿತಾ ರಾಮ್ ಸೋಮವಾರ ಆಗಮಿಸಿದ್ದು ಈ ವೇಳೆ ಅವರ ಕಾರು ಅಲ್ಲೇ ಕೆಲಸ ಮಾಡುತ್ತಿರುವ ಸ್ವಚ್ಛತಾ ಕಾರ್ಮಿಕರೊಬ್ಬರಿಗೆ ತಾಗಿತ್ತು, ಯಾವುದೇ ಅಪಾಯಗಳು ಆಗದೇ ಇದ್ದರೂ, ಗುದ್ದಿರುವ ವಿಷಯವನ್ನು ಹಲವು ಮಾಧ್ಯಮಗಳು ಸುದ್ದಿ ಪ್ರಕಟಿಸಿದೆ.

ಈ ಬೆಳವಣಿಗೆ ಬೆನ್ನಲ್ಲೇ ರಚಿತಾ ರಾಮ್,  ನಿನ್ನೆ ಲಾಲ್‌ಬಾಗ್‌ನಲ್ಲಿ ತಮ್ಮ ಕಾರು ಆಕಸ್ಮಿಕವಾಗಿ ಗುದ್ದಿದ್ದ ಕಾರ್ಮಿಕ ರಂಗಪ್ಪನನ್ನು ತಮ್ಮ ಮನೆಗೆ

ಕರೆಸಿ ಕ್ಷಮೆ ಕೋರಿದ್ದಾರೆ. 

ಈ ಘಟನೆಯಿಂದ ಕಾರ್ಮಿಕರಿಗೆ ನೋವಾಗಿದ್ದರೆ ನನ್ನ ಕಾರು ಚಾಲಕನ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ. 



Leave a Comment