ಇಂದು ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ,ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಚೇರಿ, ಪ್ಲ್ಯಾಟ್ಗಳು, ನಿವಾಸ ಸೇರಿ ಇತ್ತೀಚಿಗೆ ನಿರ್ಮಿಸಿದ್ದ ಐಷಾರಾಮಿ ಬಂಗಲೆ ಮೇಲೂ ಜಾರಿ ನಿರ್ದೇಶನಾಲಯ(ಇಡಿ)ದಾಳಿ ಮಾಡಿದೆ.ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ, ವಿಶಾಲವಾದ ಜಾಗದಲ್ಲಿ ನಿರ್ಮಾಣ ಮಾಡಿದ ಅವರ ಭವ್ಯ ಬಂಗಲೆಯ ಪೋಟೋಗಳು ವೈರಲ್ ಆಗಿವೆ.
ಕಂಟೊನ್ಮೆಂಟ್ ರೈಲ್ವೇ ಸ್ಟೇಷನ್ ಬಳಿ ಇರುವ ಈ ಮನೆಯನ್ನು ಅರೇಬಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಚಿನ್ನದ ಬಣ್ಣ ಲೇಪನ ಇದೆ.ಜೊತೆಗೆ ಇತ್ತೀಚೆಗೆ ಕೋಟ್ಯಂತರ
ರೂಪಾಯಿ ಖರ್ಚು ಮಾಡಿ ಜಮೀರ್ ತಮ್ಮ ಪುತ್ರಿಯ ಅದ್ಧೂರಿ ವಿವಾಹ ಮಹೋತ್ಸವ ನೆರವೇರಿಸಿದ್ದರು.ಆ ಪೋಟೋಗಳೂ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement