ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದಿದ್ದ ಪುರುಷರ ಹೈ ಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕಾಗಿ ಕತಾರ್ ನ ಮುತಾಝ್ ಬರ್ಷಿಮ್ ಹಾಗೂ ಇಟಲಿಯ ಗಿಯಾನ್‍ಮಾರ್ಕೊ ತಂಬೇರಿ ಇಬ್ಬರು ಜಂಪರ್‌ಗಳು ಸತತ ಪ್ರಯತ್ನಗಳಲ್ಲಿ ಸಮಬಲ ಸಾಧಿಸಿದ್ದರು. ಹೆಚ್ಚುವರಿ ಅವಕಾಶದಲ್ಲೂ ಸಮಬಲ ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರೂ ಅಥ್ಲೀಟ್‌ಗಳು ಪದಕ ಹಂಚಿಕೊಳ್ಳುವ ನಿರ್ಧಾರ ಮಾಡಿ ಕ್ರೀಡಾ ಸ್ಥೂರ್ತಿ ಮೆರೆದ ಅದ್ಭುತ ಘಟನೆ ನಡೆದಿದೆ.ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಅಭೂತಪೂರ್ವ ಕ್ಷಣವಾಗಿದೆ ಎಂದು ಕ್ರೀಡಾತಜ್ಞರು ಬಣ್ಣಿಸಿದ್ದಾರೆ.















