ಫಾಲ್ಸ್ ನಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅರ್ಬಿಯಲ್ಲಿ ನಡೆದಿದೆ.ಮೃತಳನ್ನು ಕಾರ್ಕಳ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ವರ್ಷಿತಾ ಎಂದು ಗುರುತಿಸಲಾಗಿದೆ.
ಮಂಗಳೂರಿನ ನಿವಾಸಿಯಗಿರುವ ಈಕೆ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಓದುತ್ತಿದ್ದಳು. ಈಕೆಗೆ ಈಜು ಬರುತ್ತಿತ್ತು.ಈಕೆ ತನ್ನ ಇಬ್ಬರು ಸಹಪಾಠಿಗಳೊಂದಿಗೆ ಅರ್ಭಿ ಜಲಪಾತಕ್ಕೆ ಬಂದಿದ್ದಳು.ನೀರಿಗೆ
ಇಳಿದಿದ್ದಾಗ ಸುಳಿಗೆ ಸಿಲುಕಿ ಮುಳುಗಿದ್ದಾಳೆ.ಕಾರ್ಕಳದ ಅಗ್ನಿಶಾಮಕ ದಳದ ಸಿಬಂದಿ ಬಂದು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















