ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಸಂದೇಶ್ ಸ್ವಾಮಿ ರವರು ಯರಗನಹಳ್ಳಿಯ ಪ್ರತಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್ ರವರು ವಾರ್ಡ್ ನಂಬರ್ 39 ಜಲಪುರಿ ಪೊಲೀಸ್ ಕ್ವಾರ್ಟರ್ಸ್ ನ ಮನೆ ಮನೆಗೆ ತೆರಳಿ ಬಿರುಸಿನ ಮತಯಾಚನೆ ಮಾಡಿದರು .
ಅಭ್ಯರ್ಥಿ ಸಂದೇಶ್ ಸ್ವಾಮಿ ರವರು ಮಾತನಾಡಿ ಯರಗನಹಳ್ಳಿಯಲ್ಲಿ ಜನತೆಯ ಪ್ರೀತಿ ವಿಶ್ವಾಸ ಹಾಗೂ ಅವರ ಅಭಿಪ್ರಾಯ ಈ ಬಾರಿ ಬಿಜೆಪಿ ಗೆಲ್ಲುವುದು ಹಾಗೂ ನಿಮ್ಮ ಪರವಾಗಿ ನಾವು ಮತ ಚಲಾವಣೆ ಮಾಡುವುದು ಶತಸಿದ್ಧ ಎಂದು ಮತದಾರರು ಒಮ್ಮತವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಬದಲಾವಣೆಯನ್ನು ಬಯಸಿ ಜನರು ಈ ಬಾರಿ ಗೆಲ್ಲಿಸುವುದು ಶತಸಿದ್ಧ ಎಂದು ಸಂದೇಶ ಸ್ವಾಮಿರವರು ತಿಳಿಸಿದರು.
ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್ ರವರು ಮಾತನಾಡಿ 39ನೇ ವಾರ್ಡಿನಲ್ಲಿ ಮಹಾಪೌರರಾಗಿ ಮೂರು ಬಾರಿ ನಗರಪಾಲಿಕೆ ಸದಸ್ಯರಾಗಿ ಇಡೀ ಮೈಸೂರಿಗೆ ಮಾದರಿ
ವಾರ್ಡನ್ನಾಗಿ ಅಭಿವೃದ್ಧಿ ಮಾಡಿರುವುದು ಸಂದೇಶಸ್ವಾಮಿ ರವರು ಈ ಬಾರಿ ಗೆಲ್ಲುವುದು ಶತಸಿದ್ಧ ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ಖಡಾ ಖಂಡಿತ ಎಂದು ಹೇಳಿದರು.
ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್ ನಗರ ಪಾಲಿಕೆ ಸದಸ್ಯರಾದ ಆಶಾ ನಾಗಭೂಷಣ್, ಸ್ಥಳೀಯ ಮುಖಂಡರಾದ ರಮೇಶ್, ಸ್ವರೂಪ್ ಗೌಡ, ಕಿರಣ್ ಗೌಡ, ಮೈಸೂರು ನಗರ ಕಾರ್ಯಕಾರಿಣಿ ಸದಸ್ಯರಾದ ಕೆಎಂ ರಘು, ಹಾಗೂ ಮುಖಂಡರಾದ ಅಶೋಕ್, ಸು ಮುರಳಿ ಜಗದೀಶ್ ಧನರಾಜ್ ಜೀವನ್ ನವೀನ್ ಮಹೇಶ್, ನರಸಿಂಹಮೂರ್ತಿ, ರಾಜೇಂದ್ರ, ಪುಟ್ಟರಾಜು, ಬಿಜೆಪಿ ಕಾರ್ಯಕರ್ತರಾದ ನವೀನ ಬಲರಾಮ್ ದರ್ಶನ್ ನಿಶಾಂತ್ ಚೇತನ್ ಮುಂತಾದವರು ಉಪಸ್ಥಿತರಿದ್ದರು.















