ಬೆಂಗಳೂರು : ಮಹಾನಗರ ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಸಂಬಳ ನೀಡಲಾಗದೇ ತುಂಬಾ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹಾಗಾಗಿ ನಿರ್ವಾಹಕ ರಹಿತ ಬಸ್ ಚಾಲನೆಗೆ ಬಿಎಂಟಿಸಿ ಯೋಚಿಸಿದೆ.
ಬಿಎಂಟಿಸಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಆಗುತ್ತಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್ ಹೀಗೆ ಹಲವು ಡಿಜಿಟಲ್ ವ್ಯವಸ್ಥೆ ಜಾರಿಗೆ
ಬಂದು ಟಿಕೆಟ್ ಕಲೆಕ್ಷನ್ ಸಂಪೂರ್ಣ ಡಿಜಿಟಲ್ ಮಾಡಲು ತೀರ್ಮಾನಿಸಿದೆ. ಈ ಮೂಲಕ ಬಿಎಂಟಿಸಿ ಕಂಡಕ್ಟರ್ ಲೆಸ್ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
















