Coastal Bulletin

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸ್ನೇಹಿ ತಂಡದ ವತಿಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿರುವ ಕರಾಟೆ (ಕೋ) ಗೋಜುಕನ್ ಅಸೋಸಿಯೇಶನ್ ಆವರಣದಲ್ಲಿ ಪರಿಸರ ಪ್ರೇಮಿಗಳಿಗೆ ಹಾಗೂ ನಿವಾಸಿಗಳಿಗೆ ತಮ್ಮ ಮನೆಯ ಮುಂದೆ ಪಾರ್ಕ್ ಗಳಲ್ಲಿ ನೆಡುವಂತಹ 150 ಕ್ಕೂ ಹೆಚ್ಚು ಉಚಿತ ಸಸಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕರಾದ ಎಂ ಡಿ ಪಾರ್ಥಸಾರಥಿ ರವರು ಇವತ್ತಿನ ದಿನಗಳಲ್ಲಿ ಪರಿಸರ ದಿನಾಚರಣೆ ಎಂದರೆ ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು, ತೆರಳುತ್ತಾರೆ ಆದರೆ ಆ ಸಸಿಗಳ ಪಾಲನೆ ಪೋಷಣೆ ಮಾಡುವುದು ಯಾರೊಬ್ಬರ ಕರ್ತವ್ಯ ಆಗಿರುವುದಿಲ್ಲ, ದನಕರುಗಳು ಗಿಡಗಳನ್ನು ತಿಂದು ಹಾಳು ಮಾಡುತ್ತದೆ, ಹಾಗೂ ನೀರು ಗೊಬ್ಬರವಿಲ್ಲದೆ ಒಣಗುತ್ತವೆ ಆದರೆ ಇವತ್ತು ರೂಪಿಸಿರುವ ಕಾರ್ಯಕ್ರಮ ಸಸಿ ನಮ್ಮದು ಪಾಲನೆ ನಿಮ್ಮದು ಎಂಬ ನೂತನ ಅರ್ಥಪೂರ್ಣ ಕಾರ್ಯಕ್ರಮವನ್ನು ಪರಿಸರ ಪ್ರೇಮಿಗಳಿಗೆ ಮತ್ತು ಗಿಡಗಳನ್ನು ನೆಟ್ಟು ಪಾಲನೆ ಮಾಡುವಂತಹ ನಾಗರಿಕರಿಗೆ ಉಚಿತ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯನ್ನು ಅವರದೇ ಆಗಿರುತ್ತದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಪರಿಸರ ಸ್ನೇಹಿ ತಂಡದ ಅಧ್ಯಕ್ಷರಾದ ಡಿ ಲೋಹಿತ್ ರವರು ಪ್ರತಿ ವರ್ಷವೂ ಎಂದಿನಂತೆ ಈ ವರ್ಷವೂ ಸಹ ಪರಿಸರ ದಿನಾಚರಣೆಯನ್ನು ಸಸಿಗಳನ್ನು ನೆಡುವುದರ ಮೂಲಕ ಆಚರಿಸಿಕೊಂಡು ಬರುತ್ತಿದ್ದೇವೆ ಆದರೆ ಕೆಲವು ಬಾರಿ ಎಷ್ಟು

ಸಸಿಗಳನ್ನು ನೀಡುತ್ತಿದ್ದೇವೋ ಅಷ್ಟು ಸಸಿಗಳು ಸೊಗಸಾಗಿ ಸೊಂಪಾಗಿ ತುಂಬಾ ಎತ್ತರವಾಗಿ ಬೆಳೆದಿವೆ ಕೆಲವೇ ಕೆಲವು ಒಣಗಿ ಹೋಗಿದ್ದು ಒಣಗಿ ಹೋಗಿರುವುದನ್ನು ಸಹ ನಾವು ಮನಗೊಂಡು ಇನ್ನುಮುಂದೆ ಯಾವ ಸಸಿಯು  ಸಹ ಒಣಗಬಾರದು ಸಾರ್ವಜನಿಕರಿಗೆ ಉಚಿತ ಸಸಿ ಕೊಟ್ಟು ಅವರದೇ ಪಾಲನೆ ಪೋಷಣೆ ಮಾಡಿದರೆ ಯಾವ ಸಸಿ ಒಣಗುವುದಿಲ್ಲ ಹಾಗೆಯೇ ತಾವೆಲ್ಲರೂ ಸಸಿಗಳನ್ನು ತಮ್ಮ ಮನೆಯ ಮುಂದೆ ನೆಟ್ಟರೆ ಪಾಲನೆ ಪೋಷಣೆ ಜವಾಬ್ದಾರಿ ಅವರದೇ ಆಗಿರುತ್ತದೆ ಯಾವ ಸಸಿ ಒಣಗುವುದಿಲ್ಲ ಎಂದು  ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕರಾದ ಎಂ ಡಿ ಪಾರ್ಥಸಾರಥಿ,ಬಿಜೆಪಿ ನರಸಿಂಹರಾಜ ಕ್ಷೇತ್ರದ  ಯುವಮೋರ್ಚಾ ಅಧ್ಯಕ್ಷರು, ಹಾಗೂ ಪರಿಸರ ಸ್ನೇಹಿ ತಂಡದ ಅಧ್ಯಕ್ಷರಾದ  ಡಿ ಲೋಹಿತ್, ಮೈಸೂರು ಉತ್ತರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮುತ್ತಣ್ಣ ನಿಂಗಪ್ಪ ಬಿಡನಾಳ ಹಾಗೂ ಶ್ರೀ ಸತ್ಯನಾರಾಯಣ ಅವರು ನಿವೃತ್ತ ಆರಕ್ಷಕ ಅಧಿಕಾರಿಗಳು,ಕರಾಟೆ ಗುಜುಕನ್ ಸಂಸ್ಥೆಯ ತರಬೇತಿದಾರರಾದ ರೋಹಿತ್ ಹಾಗೂ ಸಮಾಜ ಸೇವಕರಾದ ಮಹದೇವಪ್ರಸಾದ್ ರವರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

Leave a Comment