Coastal Bulletin

ಮೈಸೂರು : ಪರಿಸರ ಸ್ನೇಹಿ ತಂಡವು ಇಂದು ಮೈಸೂರು ನಗರದಲ್ಲಿರುವ ದೊಡ್ಡ ಮಾರ್ಕೆಟ್ ಮುಂಭಾಗ ಮತ್ತು ಕೆ.ಟಿ ಸ್ಟ್ರೀಟ್, ಅಶೋಕ ರಸ್ತೆಯಲ್ಲಿ, ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳಿಗೆ ತೆರಳಿ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ 500 ಕ್ಕೂ ಹೆಚ್ಚು ಪೇಪರ್ ಬ್ಯಾಗ್ ಉಚಿತವಾಗಿ ವಿತರಿಸಿ ಅರಿವು ಮೂಡಿಸಿದರು.

ಇದೇ ಸಂದರ್ಭದಲ್ಲಿ ಪೇಪರ್ ಬ್ಯಾಗ್ ವಿತರಿಸಿ ಮಾತನಾಡಿದ ದೇವರಾಜ ಸಂಚಾರಿ  ಠಾಣೆಯ  ಎ.ಎಸ್.ಐ ಪೊಲೀಸ್ ಅಧಿಕಾರಿ ರಂಗಸ್ವಾಮಿರವರು "ಪ್ಲಾಸ್ಟಿಕ್ ಬ್ಯಾಗುಗಳು ಹಾಗು ವಸ್ತುಗಳನ್ನು ಬಳಸುವುದು ನಿಲ್ಲಿಸಿ ಸುಂದರ ಪರಿಸರ ನಿರ್ಮಿಸಿ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ ಬಟ್ಟೆ, ಕಾಗದ ಹಾಗೂ ಇತರ ಪರಿಸರ ಸ್ನೇಹಿ ಕೈಚೀಲ ಬಳಸಿ ಪ್ಲಾಸ್ಟಿಕ್ನಿಂದ ಪರಿಸರವನ್ನು ದೂರವಿಡಿ ಮುಂದಿನ ಪೀಳಿಗೆಗೆ ಪ್ಲಾಸ್ಟಿಕ್ ಮುಕ್ತ ಪರಿಸರ ಕೊಡುಗೆಯಾಗಿ ನೀಡಿ ಇಂದೇ ಶಪಥ ಮಾಡಿ ನಿಮ್ಮ ಮನೆಯನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಮಾಡಿ" ಎಂದು ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಅರಿವು ಮೂಡಿಸಿದರು 

ನಂತರ ಮಾತನಾಡಿದ ಜಿವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್

" ಪ್ಲ್ಯಾಸ್ಟಿಕ್ ಉಪಯೋಗಿಸಿದರೆ ಪರಿಸರಕ್ಕೆ ಮಾರಕ, ಪ್ಲ್ಯಾಸ್ಟಿಕ್ ಭೂಮಿಗೆ ಸೇರಿದ ನಂತರ ಮಳೆಯ ನೀರು ಭೂಮಿಗೆ ಸೇರುವುದು ಬಹಳ ತೊಂದರೆಯಾಗುತ್ತದೆ ಆದ್ದರಿಂದ ಪೇಪರ್ ಬ್ಯಾಗ್ ಉಪಯೋಗಿಸಿದರೆ ಅದು ಭೂಮಿಗೆ ಸೇರಿದರೂ ನೀರನ್ನು ಭೂಮಿ ಈರುತ್ತದೆ ಪೇಪರು ಸಹ ಗೊಬ್ಬರವಾಗುತ್ತದೆ ದಯಮಾಡಿ  ಪೇಪರ್ ಬ್ಯಾಗ್ ಉಪಯೋಗಿಸಿ ಮೈಸೂರು ಸ್ವಚ್ಛತೆ ಕಾಪಾಡಿ" ಎಂದು ಅರಿವು ಮೂಡಿಸಿದರು.

ನಿವೃತ್ತ ಪೊಲೀಸ್ ಅಧಿಕಾರಿ  ಸತ್ಯನಾರಾಯಣ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಪರಿಸರ ತಂಡದ ಅಧ್ಯಕ್ಷ ಲೋಹಿತ್ ,ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ವಿನಯ್ ಕಣಗಾಲ್ ,ದುರ್ಗಾಪ್ರಸಾದ್ ,ಎಸ್ ಪಿ ಕೃಷ್ಣಪ್ಪ ,ಹಾಗೂ ಇನ್ನಿತರರು ಹಾಜರಿದ್ದರು.

Leave a Comment