ಬೆಂಗಳೂರು : ಕೆಎಂಎಫ್ ತನ್ನ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್ ಗೆ ತಲಾ 2 ಏರಿಕೆ ಮಾಡಿದೆ.
ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್ ಗೆ ತಲಾ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ದರ ಹೆಚ್ಚಳದಿಂದ ರೈತರು ಲಾಭ ಪಡೆಯಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಉತ್ಪಾದಕರಿಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಹಾಗೂ ರಾಜ್ಯದ ಗಡಿ ಪ್ರದೇಶಗಳಲ್ಲಿ ನೆರೆ ರಾಜ್ಯಗಳ
ಹಾಲು ಉತ್ಪಾದಕ ಸಂಸ್ಥೆಗಳತ್ತ ರಾಜ್ಯದ ರೈತರು ವಾಲುತ್ತಿರುವುದನ್ನು ತಪ್ಪಿಸಲು ಕೆ ಎಂ ಎಫ್ ಈ ನಿರ್ಧಾರ ಕೈಗೊಂಡಿದೆ.
ಈಗ ಹೆಚ್ಚಳ ಮಾಡಿರುವ ದರವು ಗುರುವಾರದಿಂದಲೇ ಜಾರಿಗೆ ಬರಲಿದೆ . ಆದರೆ ಗುರುವಾರ ಬೆಳಗ್ಗೆ ಹಾಲಿನ ದರ ಈಗಿನಷ್ಟೇ ಇರಲಿದೆ. 11 ಗಂಟೆಯ ನಂತರ ಈ ಹೊಸ ದರ ಅನ್ವಯವಾಗಲಿದೆ.









