Coastal Bulletin

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸರಿಯಾಗಿ ನಿಲುಗಡ್ಡೆಯಾಗದ ಕಾರಣ ತುಂಬೆ ಪರಿಸರದ ವಿದ್ಯಾರ್ಥಿಗಳಿಗೆ ,ನೌಕರರಿಗೆ ,ಹಾಗೂ ಕೂಲಿ ಕಾರ್ಮಿಕರಿಗೆ ಶಾಲಾ ಕಾಲೇಜು ,ಕಛೇರಿಗಳಿಗೆ ಕ್ಲಪ್ತ ಸಮಯಕ್ಕೆ ಹಾಜರಾಗಲು ಅಸಾಧ್ಯವಾಗಿರುವುದರಿಂದ ತುಂಬೆ ಗ್ರಾಮ ಪಂಚಾಯತ್ ನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪುತ್ತೂರು ಘಟಕಕ್ಕೆ ದೂರು ನೀಡಿಯು ಸಮಸ್ಯೆ ಪರಿಹಾರವಾಗದ ಕಾರಣ ,ತುಂಬೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರವೀಣ್ ಬಿ.ತುಂಬೆ ಇವರ ನೇತ್ರತ್ವದಲ್ಲಿ ಬೆಳಿಗ್ಗೆ 7 ರಿಂದ 9.30 ರವರೆಗೆ ಕೆ ಎಸ್ ಆರ್ ಟಿ ಸಿ ಬಸ್ಸನು ನಿಲ್ಲಿಸಿ ವಿಧ್ಯಾರ್ಥಿಗಳು,ನೌಕರರು,ಕೂಲಿ ಕಾರ್ಮಿಕರನ್ನು ಬಸ್ಸು ಹತ್ತಿಸಿ ಕಳುಹಿಸುವ ವಿನೂತನ ಕಾರ್ಯಕ್ರಮ ವನ್ನು ಇತ್ತೀಚೆಗೆ ತುಂಬೆ ಜಂಕ್ಷನ್ ನಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ವಿಭಾಗೀಯ  ನಿಯಂತ್ರಣಾಧಿಕಾರಿ  ಜಯಕರ ಶೆಟ್ಟಿಯವರ ಗಣ್ಯ ಉಪಸ್ಥಿತಿಯಲ್ಲಿ ವಿಭಾಗೀಯ ತನಿಖಾದಳದ ಉಮೇಶ್ ಎನ್ ಮತ್ತು ಭಾಸ್ಕರ್ ಶೆಟ್ಟಿ ಬಂಟ್ಟಾಳ ಗ್ರಾಮಾಂತರ ಪೋಲಿಸ್ ಠಾಣೆ ಎ ಎಸ್ ಐ

ಬಾಲಕೃಷ್ಣ ಸಿಬ್ಬಂದಿ ,ಹನುಮಂತ.ಪಿ ಹಾಗೂ ಪಂಚಾಯತ್ ಸದಸ್ಯರಾದ ಗಣೇಶ್ ಸಾಲಿಯಾನ್ ,ಇಬ್ರಾಹಿಂ ರಾಮಲ್ ಕಟ್ಟೆ,ಮಹಮ್ಮದ್ ಝಹೂರ್ ,ಸಮಾಜ ಸೇವಕ ಹಾಗೂ ಕಲಾವಿದ ಸದಾಶಿವ ಡಿ.ತುಂಬೆ ,ಪ್ರಶಾಂತ್ ಕೊಟ್ಟಾರಿ, ನವೀನ  ಕೊಟ್ಟಿಂಜ ಪ್ರಮುಖರು ಉಪಸ್ಥಿತರಿದ್ದರು.

Leave a Comment