ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಧಿಕಾರಿ ಸೇರಿ 17 IAS ಅಧಿಕಾರಿಗಳ ವರ್ಗಾವಣೆ; 5 ಜಿಲ್ಲೆಗೆ ಹೊಸ ಡಿಸಿ ನೇಮಿಸಿ ಸರ್ಕಾರ ಆದೇಶ

Coastal Bulletin
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಧಿಕಾರಿ ಸೇರಿ 17 IAS ಅಧಿಕಾರಿಗಳ ವರ್ಗಾವಣೆ; 5 ಜಿಲ್ಲೆಗೆ ಹೊಸ ಡಿಸಿ ನೇಮಿಸಿ ಸರ್ಕಾರ ಆದೇಶ

ಬೆಂಗಳೂರು: ದಕ್ಷಿಣ ಕನ್ನಡ, ಹಾಸನ, ಕೊಪ್ಪಳ, ಉಡುಪಿ ಹಾಗೂ ಬಾಗಲಕೋಟೆಯ ಜಿಲ್ಲಾಧಿಕಾರಿಗಳು ಹಾಗೂ ಕೆಲವೆಡೆ ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.

ಅವರ ಸ್ಥಾನಕ್ಕೆ 2016ರ ಬ್ಯಾಚಿನ ಐಎಎಸ್ ಅಧಿಕಾರಿ ದರ್ಶನ್ ಎಚ್‌.ವಿ. ಅವರನ್ನು ನಿಯುಕ್ತಿ ಮಾಡಲಾಗಿದೆ. ದರ್ಶನ್, ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದರು.

ಮುಲ್ಲೈ ಮುಗಿಲನ್ ಇಂದಿಗೆ ಎರಡು ವರ್ಷಗಳ ಹಿಂದೆ 2023ರ ಜೂನ್‌ 17 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದರು. ಅವರನ್ನು ಬೆಂಗಳೂರಿನ ಇನ್‌ಸ್ಪೆಕ್ಟರ್ ಜನರಲ್ ಆಫ್ ರೆಜಿಸ್ಟ್ರೇಷನ್ ಮತ್ತು ಕಮೀಷನರ್ ಆಫ್ ಸ್ಟ್ಯಾಂಪ್ಸ್ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಉಡುಪಿಗೆ ಹೊಸ ಡಿಸಿ ನೇಮಕ

ಆರ್‌ಡಿಪಿಆರ್‌ನ ಇ ಗವರ್ನೆಸ್‌ ನಿರ್ದೇಶಕರಾಗಿದ್ದ ಟಿ.ಕೆ.ಸ್ವರೂಪಾ ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಹಿಂದಿನ ಡಿಸಿ ವಿದ್ಯಾಕುಮಾರಿ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ.

ಒಟ್ಟು 17 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಕೆ.ಎಂ.ಜಾನಕಿ- ಕೆಪಿಎಸ್‌ಸಿ ಕಾರ್ಯದರ್ಶಿ

ಸಿ.ಸತ್ಯಭಾಮ- ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು

ಕೆ.ಎಸ್‌.ಲತಾ ಕುಮಾರಿ- ಹಾಸನ ಜಿಲ್ಲಾಧಿಕಾರಿ

ಟಿ.ಕೆ.ಸ್ವರೂಪಾ-

ಉಡುಪಿ ಜಿಲ್ಲಾಧಿಕಾರಿ

ಡಾ.ಅವಿನಾಶ್‌ ಮೆನನ್‌ ರಾಜೇಂದ್ರನ್‌- ಎನ್‌ಎಚ್‌ಎಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಮಿಷನ್‌ ಡೈರೆಕ್ಟರ್‌

ಎಂ.ಪಿ. ಮುಲೈ ಮುಗಿಲನ್‌- ನೋಂದಣಿ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು

ನಳಿನಿ ಅತುಲ್‌- ಕೆಕೆಆರ್‌ಡಿಬಿ ಕಾರ್ಯದರ್ಶಿ

ಎಚ್‌.ವಿ.ದರ್ಶನ್‌- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

ಸಂಗಪ್ಪ- ಬಾಗಲಕೋಟೆ ಜಿಲ್ಲಾಧಿಕಾರಿ

ಸುರೇಶ್‌ ಬಿ. ಇಟ್ನಾಳ್‌- ಕೊಪ್ಪಳ ಜಿಲ್ಲಾಧಿಕಾರಿ

ಡಾ.ವೈ.ನವೀನ್‌ ಭಟ್‌- ಚಿಕ್ಕಬಳ್ಳಾಪುರ ಜಿಪಂ ಸಿಇಒ

ಗರೀಮಾ ಪನ್ವಾರ್‌- ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು

ರಾಹುಲ್‌ ರತ್ನಂ ಪಾಂಡೆ- ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಕಾರ್ಯಕಾರಿ ನಿರ್ದೇಶಕ

ಪ್ರಕಾಶ್‌ ಜಿ.ಟಿ. ನೆಟ್ಟಾಲಿ- ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ (ಬಿಸಿಯೂಟ)

ವರ್ನಿತ್‌ ನೇಗಿ- ಕೊಪ್ಪಳ ಜಿಪಂ ಸಿಇಒ

ಗಿಟ್ಟೆ ಮಾಧವ್‌ ವಿಠ್ಠಲ್‌ ರಾವ್‌- ದಾವಣಗೆರೆ ಜಿಪಂ ಸಿಇಒ

ಶಮ್ಲಾಇಕ್ಬಾಲ್‌- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ತೋಟಗಾರಿಕೆ, ರೇಷ್ಮೆ ಇಲಾಖೆ ಕಾರ್ಯದರ್ಶಿ (ಹೆಚ್ಚುವರಿ)

Leave a Comment