ಋುತುಚಕ್ರದ ರಜೆ ಕರ್ನಾಟಕದಲ್ಲಿ ಜಾರಿ; ಸರ್ಕಾರ ಮಹತ್ವದ ಆದೇಶ - ಯಾವ ವಯಸ್ಸಿನ ಮಹಿಳೆಯರಿಗೆ ಅನ್ವಯ? ಷರತ್ತುಗಳೇನು?

Coastal Bulletin
ಋುತುಚಕ್ರದ ರಜೆ ಕರ್ನಾಟಕದಲ್ಲಿ ಜಾರಿ; ಸರ್ಕಾರ ಮಹತ್ವದ ಆದೇಶ - ಯಾವ ವಯಸ್ಸಿನ ಮಹಿಳೆಯರಿಗೆ ಅನ್ವಯ? ಷರತ್ತುಗಳೇನು?

ಬೆಂಗಳೂರು: ಮಹಿಳಾ ನೌಕರರಿಗೆ ಮಾಸಿಕ ಒಂದು ದಿನ ವೇತನಸಹಿತ 'ಋುತುಚಕ್ರ ರಜೆ' ಕಲ್ಪಿಸುವ ಸಂಬಂಧ ಕರ್ನಾಟಕ ಸರ್ಕಾರ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯಾದ್ಯಂತ ನಾನಾ ಕಾಯಿದೆಗಳಡಿ ನೋಂದಣಿಯಾದ ಎಲ್ಲ ಕೈಗಾರಿಕೆ, ಕಾರ್ಖಾನೆ, ಅಂಗಡಿ, ವಾಣಿಜ್ಯ ಸಂಸ್ಥೆ ಸೇರಿದಂತೆ ಇತರೆ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 18 ರಿಂದ 52 ವರ್ಷ ವಯೋಮಿತಿಯ ಎಲ್ಲ ಸರ್ಕಾರಿ, ಕಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ರಜೆ ನೀಡಲು ಸೂಚನೆ ನೀಡಿದೆ.

1948ರ ಕಾರ್ಖಾನೆಗಳ ಕಾಯಿದೆ, 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ, 1951ರ ತೋಟ ಕಾರ್ಮಿಕರ ಕಾಯಿದೆ, 1966ರ ಬೀಡಿ ಮತ್ತು ಸಿಗಾರ್‌ ಕಾರ್ಮಿಕರ (ಉದ್ಯೋಗ ಮತ್ತು ಷರತ್ತುಗಳು) ಕಾಯಿದೆ ಹಾಗೂ 1961 ರ ಮೋಟಾರು ಸಾರಿಗೆ ಕಾರ್ಮಿಕರ ಕಾಯಿದೆಯಡಿ ನೋಂದಣಿಯಾಗಿರುವ ಎಲ್ಲ ಕೈಗಾರಿಕೆಗಳು ಮತ್ತು ಸಂಸ್ಥೆ್ಥಗಳಲ್ಲಿಕಾರ್ಯ ನಿರ್ವಹಿಸುತ್ತಿರುವ 18 ರಿಂದ 52 ವರ್ಷ ವಯೋಮಿತಿಯವರಿಗೆ ಈ ಸೌಲಭ್ಯ ಸಿಗಲಿದೆ.

ವಾರ್ಷಿಕ 12 ವೇತನಸಹಿತ ರಜೆ

ತಿಂಗಳಿಗೆ ಒಂದು ದಿನದಂತೆ ವಾರ್ಷಿಕ 12 ದಿನಗಳ ವೇತನಸಹಿತ ರಜೆಯ ಸೌಲಭ್ಯವನ್ನು ಉದ್ಯೋಗದಾತರು ಕಲ್ಪಿಸುವಂತೆ ಸೂಚಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದ್ದು, ಎರಡು ಷರತ್ತು ವಿಧಿಸಿದೆ.

ಏನೆಲ್ಲಾ ಷರತ್ತುಗಳು?

ಮಹಿಳಾ ನೌಕರರು ಆಯಾ

ತಿಂಗಳ 'ಋುತುಚಕ್ರ ರಜೆ'ಯನ್ನು ಆಯಾ ತಿಂಗಳಲ್ಲೇ ಬಳಸಿಕೊಳ್ಳಬೇಕು.

ಹಿಂದಿನ ತಿಂಗಳ 'ಋುತುಚಕ್ರ ರಜೆ'ಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ.

ಪ್ರತಿ ತಿಂಗಳು ಒಂದು ದಿನದ 'ಋುತುಚಕ್ರ ರಜೆ' ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಒದಗಿಸುವ ಅವಶ್ಯಕತೆ ಇಲ್ಲ

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಕರ್ನಾಟಕ ಸರ್ಕಾರವು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಮಾಸಿಕ ಋತುಚಕ್ರದ ರಜೆ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿತ್ತು. ಈ ಹೊಸ ನೀತಿಯ ಪ್ರಕಾರ, ರಾಜ್ಯದ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ಸಿಗಲಿದೆ. ಮೂರು ತಿಂಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿತ್ತು. ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿ, ಐಟಿ ಮತ್ತು ಇತರ ಖಾಸಗಿ ಸಂಸ್ಥೆಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಈ ರಜೆ ಅನ್ವಯಿಸುತ್ತದೆ ಎಂದು ಕಾನೂನು ಸಚಿವ ಎಚ್‌ಕೆ ಪಾಟೀಲ್ ತಿಳಿಸಿದ್ದರು.

Leave a Comment