Coastal Bulletin

ಉಡುಪಿ : ಇಂದು ನಿಗದಿಪಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ ತಾಲೂಕಿನ ಪ್ರವಾಸ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ರದ್ದು ಮಾಡಲಾಗಿದೆ.

ರಸ್ತೆ ಮಾರ್ಗವಾಗಿ ಓಡಾಡುವುದು ತುಂಬಾ ಟ್ರಾವೆಲಿಂಗ್ ಆಗುತ್ತದೆ ಎಂಬ ಕಾರಣದಿಂದ ಇಂದಿನ ಸಿಎಂ ಬಸವರಾಜ ಬೊಮ್ಮಾಯಿ ಭಟ್ಕಳ್ ಭೇಟಿ ರದ್ದು ಮಾಡಲಾಗಿದ್ದು, ಇಂದು ಸಂಪೂರ್ಣವಾಗಿ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಪರಿವೀಕ್ಷಣೆ ಮಾಡಲಿದ್ದಾರೆ. ಮುಂದಿನ ಬಾರಿ ಕಾರಾವಾರ, ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲು

ಚಿಂತನೆ ಮಾಡಲಾಗಿದೆ ಎನ್ನಲಾಗಿದೆ.

ನಿನ್ನೆ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ಆಗಮಿಸಿದ್ದು, ಜಿಲ್ಲೆಯಲ್ಲಿ ಇಂದು ನೆರೆ ಪ್ರವಾಸ ನಡೆಸಲಿದ್ದಾರೆ. ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ನೆರೆ ಹಾನಿ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ರಜತಾದ್ರಿಯಲ್ಲಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

Leave a Comment