ದೇಶದಲ್ಲೇ ಸ್ವಚ್ಛತೆಗೆ ಹೆಸರುವಾಸಿಯಾಗಿರುವುದು ಮೈಸೂರು,ಆದರೆ ಅತಿಹೆಚ್ಚು ಕೂಲಿ ಕಾರ್ಮಿಕರು ಹಾಗೂ ಗುಡಿಸಲುಗಳು ಇರುವ ಕ್ಷೇತ್ರ ಹಾಗೂ ಅಭಿವೃದ್ದಿ ಕಾಣದೇ ಇರುವ ಕ್ಷೇತ್ರ ನರಸಿಂಹರಾಜ ಕ್ಷೇತ್ರ ಈಗಾಗಲೇ ಮಳೆಗಾಲ ಶುರುವಾಗಿದೆ. ಪ್ರತಿನಿತ್ಯ ಮಳೆ ಬರುತ್ತಲೇ ಇದೆ. ಈ ಭಾಗದಲ್ಲಿ ವಾಸಿಸುವ ಜನ ಬಹುತೇಕ ಗುಡಿಸಲಲ್ಲಿ ಮತ್ತು ಮಣ್ಣಿನ ಮನೆಯಲ್ಲಿ ಹಾಗೂ ನೂರಾರು ವರ್ಷಗಳ ಹಿಂದೆ ಕಟ್ಟಿದ ಪೊಲೀಸ್ ಕ್ವಾಟ್ರಸ್ ಅಂತಹ ಮನೆಗಳು ಮಳೆ ಬಂತೆಂದರೆ ಸಾಕು ಸೋರುತ್ತವೆ ,ವಸ್ತಿ ಹಿಡಿಯುತ್ತವೆ, ಮನೆಯ ಗೋಡೆಗಳು ಬೀಳುವಂತಹ ಸಂದರ್ಭಗಳು ಎದುರಾಗಿವೆ.
ಒಳಚರಂಡಿಗಳು ಕಟ್ಟಿಕೊಂಡು ಮನೆಯ ಒಳಗೆ ನುಗ್ಗುವ ಸಾಧ್ಯತೆ ಕಂಡುಬರುತ್ತಿವೆ, ರಸ್ತೆಗಳು ಹಳ್ಳ ಕೊಳ್ಳಗಳಿಂದ ಕೂಡಿದ್ದು, ಮಳೆ ಬಂದರೆ ಸಾಕು ನೀರು ತುಂಬುತ್ತದೆ ಆ ಗುಂಡಿಗೆ ವಾಹನದಾರರು ಹಳ್ಳಕ್ಕೆ ಬಿಟ್ಟು ಗೊತ್ತಾಗದೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ.
ಸಾರ್ವಜನಿಕರಿಗಂತೂ ಬಹಳ ತೊಂದರೆಯಾಗಿದೆ. ಈಗಾಗಲೇ ಅನೇಕ ಜನರು ಕ್ಷೇತ್ರದಿಂದ ದೂರ ಹೋಗಿದ್ದಾರೆ, ಕ್ಷೇತ್ರದ ಶಾಸಕ ತನ್ವೀರ್ ಸೇಠ್ ರವರು ಶಾಸಕ ಆಗಿದ್ದಾಗಿನಿಂದಲೂ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ ಸಾರ್ವಜನಿಕರ
ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವರು ಎಲ್ಲೂ ಕಾಣುತ್ತಲೇ ಇಲ್ಲ ದಯವಿಟ್ಟು ಹುಡುಕಿಕೊಡಿ ಎಂಬ ಭಾವನೆಗಳು ಜನರಲ್ಲಿ ವ್ಯಕ್ತವಾಗಿದೆ. ಅಧಿಕಾರಿ ವರ್ಗದವರಂತೂ ಕಂಡು ಕಾಣದಂತೆ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಕೇಳಿ ಬಗೆಹರಿಸಬೇಕಾದಂತಹ ಶಾಸಕರು ಹಾಗೂ ನಗರ ಪಾಲಿಕೆ ಸದಸ್ಯರು ಮತ್ತು ಅಧಿಕಾರಿ ವರ್ಗದವರು ಏನು ಮಾಡುತ್ತಾ ಇದ್ದಾರೆ ಎಂದು ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
















