Coastal Bulletin

ಬಾಗಲಕೋಟೆ: ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ್ ಕಾರು ಅಪಘಾತವಾಗಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾರೆ.ಕೊಡ್ಲೆಪ್ಪ ಬೋಳಿ ಮೃತ ಬೈಕ್ ಸವಾರ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ರಾಸ್ ಬಳಿಯ ಚಿತ್ರದುರ್ಗ-ಸೊಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದ್ದು ಕುಡ್ಲೆಪ್ಪ ಹೊಲದಿಂದ ಮನೆಗೆ ಹಿಂದಿರುಗುವಾಗ ಹಿಂಬದಿಯಿಂದ ಬಂದು ಡಿಸಿಎಂ ಪುತ್ರನ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.


ಕಾರ್ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಕೂಡ್ಲೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಕೂಡ್ಲೆಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. 


ಇನ್ನು ಅಪಘಾತದ ನಡೆದ ಬಳಿಕ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ್ ಬೇರೆ ಕಾರಿನ ಮೂಲಕ ಪರಾರಿಯಾಗಲು

ಯತ್ನಿಸಿದ ಸಂದರ್ಭ ಸ್ಥಳೀಯರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್ನು ಅಪಘಾತ ನಡೆದ ಸ್ಥಳದಲ್ಲಿ ಚಿದಾನಂದ್ ಸವದಿಯನ್ನು ಕೆಲಹೊತ್ತು ಹಿಡಿದಿಟ್ಟಿದ್ದರು ಎಂದು ತಿಳಿದುಬಂದಿದೆ.ಚಿದಾನಂದ, ಕಾರಿನ ನಂಬರ್ ಪ್ಲೇಟ್ ಕಿತ್ತು ಹಾಕಿದ್ದು, ನಂತರ ಗ್ರಾಮಸ್ಥರು ತೆಗೆದಿದ್ದ ಫೋಟೊ ಗಳನ್ನು ಮೊಬೈಲ್ ನಿಂದ ಡಿಲೀಟ್ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಈ ವೇಳೆ ನಾನು ಡಿಸಿಎಂ ಲಕ್ಷ್ಮಣ್ ಸವದಿ ಮಗ ಅಂತ ಅವಾಜ್ ಹಾಕಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ.

ಕಾರ್ ಚಾಲಕ ಹನುಮಂತ್ ಸಿಂಗ್ ವಿರುದ್ಧ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment