ಬೆಂಗಳೂರು ಏರ್ ಶೋ 2025ಕ್ಕೆ ಕ್ಷಣಗಣನೆ

Coastal Bulletin
ಬೆಂಗಳೂರು ಏರ್ ಶೋ 2025ಕ್ಕೆ ಕ್ಷಣಗಣನೆ

ಬೆಂಗಳೂರು ಏರ್ ಶೋ - 2025ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಬಾರಿಯ ಏರ್‌ಶೋ ಹಲವು ಕಾರಣಗಳಿಂದ ವಿಶೇಷವಾಗಿದೆ. ಬೆಂಗಳೂರಿನ ವಿಶ್ವ ವಿಖ್ಯಾತ ಏರ್‌ ಶೋ ಇದೇ ತಿಂಗಳು (ಫೆಬ್ರವರಿ 10ರಿಂದ 14) 10ನೇ ತಾರೀಖಿನಿಂದ ಪ್ರಾರಂಭವಾಗಲಿದೆ. ಏರೋ ಇಂಡಿಯಾ 2025ಕ್ಕೆ ದೇಶ - ವಿದೇಶದಿಂದ ಜನ ಭಾಗವಹಿಸಲಿದ್ದಾರೆ. ಕೇಂದ್ರ ರಕ್ಷಣಾ ಸಚಿವಾಲಯ ಈ ಶೋವನ್ನು ಆಯೋಜಿಸುತ್ತದೆ.

ಬಹು ಕೋಟಿಯ ಹೂಡಿಕೆ ಹಾಗೂ ಬಾನಂಗಳದಲ್ಲಿ ಚಿತ್ತಾಕರ್ಷಕ ವಿಮಾನಗಳ ಹಾರಾಟವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಏರೋ ಇಂಡಿಯಾ 2025 ನೋಡಬೇಕೆಂದರೆ ಏನು ಮಾಡಬೇಕು, ಟಿಕೆಟ್‌ ಬುಕ್‌ ಮಾಡುವುದು ಹೇಗೆ, ಟಿಕೆಟ್‌ ಬೆಲೆ ಎಷ್ಟು ಹಾಗೂ ಎಲ್ಲಿ ನಡೆಯಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಏರ್‌ ಶೋ ನಡೆಯುತ್ತದೆ. ಬೆಂಗಳೂರಿನ ಯಲಹಂಕ ವಲಯದ ಏರ್‌ ಪೋರ್ಸ್ ಸ್ಟೇಷನ್‌ ಪ್ರದೇಶದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ.

ಬೆಂಗಳೂರು ಏರ್‌ಶೋನ ಮೊದಲ ಮೂರು ದಿನಗಳ ಕಾಲ ಅಂದರೆ ಫೆಬ್ರವರಿ 10 ರಿಂದ 12ವರೆಗೆ ಉದ್ಯಮಿಗಳು, ವೃತ್ತಿಪರರು ಹಾಗೂ ಹೂಡಿಕೆದಾರಿಗಾಗಿ ಅವಕಾಶ ಇರಲಿದೆ. ಇನ್ನು ಕೊನೆಯ ಎರಡು ದಿನಗಳಲ್ಲಿ ಅಂದರೆ ಫೆಬ್ರವರಿ 13 ಮತ್ತು 14ರ ವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರಲಿದೆ.

ಏರೋ

ಇಂಡಿಯಾ 2025 ಪ್ರದರ್ಶನ ಸಮಯದ ವಿವರ: ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಏರ್‌ ಶೋದಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ಸುತ್ತಾಡುವುದಕ್ಕೆ ಅವಕಾಶ ಇರಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ. ಆಗ ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್‌ ಹಾಗೂ ಡ್ರೋನ್‌ಗಳು ಬಾನಂಗಳದಲ್ಲಿ ಸ್ವಚ್ಛಂದವಾಗಿ ಹಾರಾಡುವುದನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಏರೋ ಇಂಡಿಯಾ 2025ರ ಟಿಕೆಟ್ ಬೆಲೆ ವಿವರ

* ಸಂದರ್ಶಕರ ಪಾಸ್: ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ.

* ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ | ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ.

* ವ್ಯಾಪಾರ ಪಾಸ್: ಭಾರತೀಯರಿಗೆ 5,000 ಸಾವಿರ ಹಾಗೂ ವಿದೇಶಿಗರಿಗೆ ಯುಎಸ್ ಡಾಲರ್ 50 ಇರಲಿದೆ.

Leave a Comment