ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಡಿಜಿಟಲ್ ಮಾದರಿಯ ನೂತನ ಸಾಧನ ಎಂದೇ ಹೇಳಲಾದ ಇ-ರುಪಿಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬಿಡುಗಡೆ ಮಾಡಲಿದ್ದಾರೆ. ಸಂಜೆ 4.30ಕ್ಕೆ ಪ್ರಧಾನಿ ಅನಾವರಣಗೊಳಿಸಲಿದ್ದಾರೆ.
ಇ-ರುಪಿ ನಗದುರಹಿತ ಮತ್ತು ಸ್ಪರ್ಶರಹಿತ ಡಿಜಿಟಲ್ ಪಾವತಿಯಾಗಿದೆ.ಇದು ಸೇವಾದಾರರನ್ನು ಮತ್ತು ಬಳಕೆದಾರರನ್ನು ಡಿಜಿಟಲ್ ರೂಪದಲ್ಲಿ ಸಂಪರ್ಕಿಸುತ್ತದೆ. ಇ-ರುಪಿ ಯು ಕ್ಯೂಆರ್ ಕೋಡ್ ಅಥವಾ ಎಸ್ಎಮ್ಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ. ಇದು ನೇರವಾಗಿ
ಫಲಾನುಭವಿಗಳ ಮೊಬೈಲ್ಗೆ ತಲುಪಲಿದೆ. ಫಲನುಭವಿಗಳು ಈ ವೋಚರ್ನ್ನು ಕಾರ್ಡ್ ಇಲ್ಲದೆಯೂ ಡಿಜಿಟಲ್ ಪೇಮೆಂಟ್ ಆ್ಯಪ್ ಇಲ್ಲದೆಯೂ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ನ ನೆರವಿಲ್ಲದೆಯೂ ಹಣ ಪಡೆಯಬಹುದಾಗಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ.
















