ಮಾಸ್ಕೋ: ಭಾರತೀಯ ಸಂಸದರ ನಿಯೋಗವನ್ನು ಹೊತ್ತ ವಿಮಾನವು ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ಕ್ಷಣಗಳ ಮೊದಲು ಡ್ರೋನ್ ದಾಳಿ ನಡೆದಿದೆ. ಹೀಗಾಗಿ ಭಾರತೀಯ ನಿಯೋಗವನ್ನು ಹೊತ್ತ ವಿಮಾನವು ಬಹಳ ಹೊತ್ತು ಗಾಳಿಯಲ್ಲಿ ಸುತ್ತಾಡಿದೆ. ನಂತರ ಪರಿಸ್ಥಿತಿ ಸುಧಾರಿಸಿದ ನಂತರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡೋನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.
ಕನ್ನಿಮೋಳಿ ನೇತೃತ್ವದ ಸಂಸದರ ನಿಯೋಗ ಮೇ 22 ರಂದು ರಷ್ಯಾಕ್ಕೆ ತೆರಳಿತ್ತು. ಕನ್ನಿಮೋಳಿ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ತೊಂದರೆ ಅನುಭವಿಸಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಭಾರತೀಯ ಸಂಸದರ ತಂಡ ಮಾಸ್ಕೋಗೆ ಹೋಗಿದೆ. ಆಪರೇಷನ್ ಸಿಂಧೂರ್‌ನ ಅಗತ್ಯವನ್ನು ಎತ್ತಿ ತೋರಿಸುವುದು ಮತ್ತು ಪಾಕಿಸ್ತಾನವನ್ನು ಬಯಲು ಮಾಡುವುದು ಇದರ ಉದ್ದೇಶವಾಗಿದೆ.
ಕನಿಮೋಳಿ ಅವರು ತಮ್ಮ ನಿಯೋಗದ
ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಬಿಜೆಪಿ ಸಂಸದ ಬ್ರಿಜೇಶ್ ಚೌಟಾ, ಎಎಪಿ ಸಂಸದ ಡಾ. ಅಶೋಕ್ ಕುಮಾರ್ ಮಿತ್ತಲ್, ಮಾಜಿ ರಾಜತಾಂತ್ರಿಕ ಮಂಜೀವ್ ಪುರಿ ಮತ್ತು ಆರ್ಜೆಡಿ ಸಂಸದ ಪ್ರೇಮಚಂದ್ ಗುಪ್ತಾ ಇದ್ದಾರೆ.
ಮಾಸ್ಕೋಗೆ ನಿಯೋಗದ ಸದಸ್ಯರೊಂದಿಗೆ ಹೊರಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಉಕ್ರೇನ್‌ನಿಂದ ಡೋನ್ ದಾಳಿ
ಮಾಸ್ಕೋ ವಿಮಾನ ನಿಲ್ದಾಣದ ಮೇಲಿನ ಈ ಡೋನ್ ದಾಳಿಯನ್ನು ಉಕ್ರೇನ್ ನಡೆಸಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್‌ನ ಈ ಡೋನ್ ದಾಳಿಯಿಂದಾಗಿ, ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹಲವಾರು ಗಂಟೆಗಳ ಸ್ಥಗಿತಗೊಳಿಸಲಾಗಿದೆ.














