ಇಂಡೋನೇಷ್ಯಾ : ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಬಿಆರ್ ಐ ಲಿಗಾ1 ಫುಟ್ಬಾಲ್ ಪಂದ್ಯದ ವೇಳೆ ಈ ಹಿಂಸಾಚಾರ ನಡೆದಿದ್ದು, 127 ಜನ ಸಾವನ್ನಪ್ಪಿದ ಘಟನೆ ನಡೆದಿದೆ.
ಫುಟ್ಬಾಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿಗಳ ಮಧ್ಯೆ ಕಾದಾಟ ನಡೆದಿದೆ. ಘಟನೆಯಲ್ಲಿ 180ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ವರದಿ ತಿಳಿಸಿದೆ.
ಅರೆಮಾ ಎಫ್ ಸಿ ಮತ್ತು
ಪರ್ಸೆಬಯಾ ಸುರಬಯಾ ಸಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಅರೆಮಾ ಎಫ್ಸಿ ತಂಡ ಸೋತ ಕಾರಣ ರೊಚ್ಚಿಗೆದ್ದ ಸಾವಿರಾರು ಅಭಿಮಾನಿಗಳು ಕಿತ್ತಾಡಿಕೊಂಡಿದ್ದು , ಹಿಂಸಾತ್ಮಕ ರೂಪ ಪಡೆದುಕೊಂಡಿದೆ.













