ಬಕ್ರೀದ್ ಹಬ್ಬಕ್ಕೆ ಕುರಿ ಮೇಲೆ ರಾಮನ ಹೆಸರು ಬರೆದು ಮಾರಾಟಕ್ಕೆ ಯತ್ನ,ಅಂಗಡಿ ಮಾಲೀಕನ ಬಂಧನ.

Coastal Bulletin
ಬಕ್ರೀದ್ ಹಬ್ಬಕ್ಕೆ ಕುರಿ ಮೇಲೆ ರಾಮನ ಹೆಸರು ಬರೆದು ಮಾರಾಟಕ್ಕೆ ಯತ್ನ,ಅಂಗಡಿ ಮಾಲೀಕನ ಬಂಧನ.

ಬಕ್ರೀದ್‌ಗೆ ಬಲಿ ಕೊಡುವ ಕುರಿ ಮೇಲೆ ಶ್ರೀರಾಮನ ಹೆಸರು ಬರೆದ ವಿಚಿತ್ರ ಘಟನೆ ಮಹಾರಾಷ್ಟ್ರದ ನವಿ ಮುಂಬೈನ ಸಿಬಿಡಿ ಬೇಲಾಪುರ ಪ್ರದೇಶದಲ್ಲಿ ನಡೆದಿದೆ.

ಬಲಿ ಕೊಟ್ಟ ಕುರಿ ಮೇಲೆ ರಾಮನ ಹೆಸರು ಬರೆದಿದ್ದರಿಂದ ಹಿಂದೂಗಳ ಭಾವನೆಗೆ ದಕ್ಕೆ ತರುವಂತಹ ಘಟನೆ ನಡೆದಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಎದುರು ಹಿಂದೂ ಸಂಘಟನೆಯವರು ಪ್ರತಿಭಟನೆಗೆ ಮುಂದಾಗಿದ್ದರು. ವಿಷಯ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಮಟನ್ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.

ಬೇಲಾಪುರ ಪ್ರದೇಶದಲ್ಲಿ ರಾಮನ ಹೆಸರು ಬರೆದು ಕುರಿ

ಮಾರುವ ಯತ್ನ ನಡೆದಿದೆ. ಈ ಮೇಕೆ ಬಲಿ ಕೊಡಲು ಯೋಜನೆ ರೂಪಿಸಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಹಿಂದೂ ಸಂಘಟನೆಯವರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಬಳಿಕ ಠಾಣೆಯ ಹೊರಗೆ ಗಲಾಟೆ ಮಾಡಿದ್ದಾರೆ. ವಿಷಯ ಉಲ್ಬಣಗೊಳ್ಳುತ್ತಿರುವುದನ್ನು ನೋಡಿದ ನವಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿ, ಮಟನ್ ಅಂಗಡಿಯ ಮಾಲೀಕರನ್ನು ಬಂಧಿಸಿದ್ದಾರೆ.

Leave a Comment