ಮಹರಾಷ್ಟ್ರ : ಕೇದಾರನಾಥ ದೇಗುಲದಲ್ಲಿ ನಡೆದ ಚಿನ್ನಾಭರಣ ಹಗರಣದ ಬಗ್ಗೆ ಗಂಭೀರ ಆರೋಪಗಳನ್ನು ಎತ್ತಿದ್ದು, 228 ಕಿಲೋಗ್ರಾಂಗಳಷ್ಟು ಚಿನ್ನ ನಾಪತ್ತೆಯಾಗಿದ್ದು, ಯಾವುದೇ ತನಿಖೆಯನ್ನು ಪ್ರಾರಂಭಿಸಿಲ್ಲ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ದೆಹಲಿಯಲ್ಲಿ ಕೇದಾರನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸುವ ಯೋಜನೆಗಳನ್ನು ಅವರು ಪ್ರಶ್ನಿಸಿ, ಇದು ಮತ್ತೊಂದು ಹಗರಣಕ್ಕೆ ಕಾರಣವಾಗಬಹುದು ಎಂದರು. ಮಹರಾಷ್ಟ್ರದಲ್ಲಿ ಮಾದ್ಯಮಗಳೋಂದಿಗೆ ಮಾತನಾಡಿರುವ ಅವರು ಕೇದಾರನಾಥದಲ್ಲಿ ಚಿನ್ನದ ಹಗರಣವಾಗಿದೆ; ಆ ವಿಷಯ ಏಕೆ ಪ್ರಶ್ನಿಸುತ್ತಿಲ್ಲಾ? ಅಲ್ಲಿ ಹಗರಣ ಮಾಡಿದ ನಂತರ ಈಗ ದೆಹಲಿಯಲ್ಲಿ ಕೇದಾರನಾಥವನ್ನು ನಿರ್ಮಿಸಲಾಗುತ್ತಿದೆ? ಕೇದಾರನಾಥದಿಂದ 228 ಕೆಜಿ ಚಿನ್ನ ನಾಪತ್ತೆ ನಂತರ ದೆಹಲಿ ಮತ್ತೊಂದು ಹಗರಣಕ್ಕೆ ಕಾರಣವಾಗಬಹುದು ಎಂದರು. ಇದಕ್ಕೆಲ್ಲ ಯಾರು ಹೊಣೆ? ಎಂದು ಪ್ರಶ್ನಸಿದ್ದಾರೆ.
ಉತ್ತರಾಖಂಡದ ಗರ್ವಾಲ್ ಹಿಮಾಲಯ ಶ್ರೇಣಿಯಲ್ಲಿರುವ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಾಲಯದಲ್ಲಿ 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದ್ದಾರೆ. “ಕೇದಾರನಾಥದಲ್ಲಿ ಚಿನ್ನದ ಹಗರಣ ನಡೆದಿದೆ. ಆ ವಿಚಾರದ ಬಗ್ಗೆ
ಏಕೆ ಚಕಾರ ಎತ್ತುತ್ತಿಲ್ಲ? ಅಲ್ಲಿ ಹಗರಣ ಮಾಡಿ ಈಗ ದೆಹಲಿಯಲ್ಲಿ ಕೇದಾರನಾಥ ನಿರ್ಮಾಣವಾಗಲಿದೆಯೇ? ಹೀಗೇನಾದರೂ ಆದರೆ ಮತ್ತೊಂದು ಹಗರಣ ನಡೆಯಲಿದೆ ಎಂದಿದ್ದಾರೆ.ಜುಲೈ 10ರಂದು ದೆಹಲಿಯಲ್ಲಿ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು.









