ನವದೆಹಲಿ : ಗಡಿ ಉಲ್ಲಂಘನೆಗೆ ಯತ್ನಿಸಿದ ಚೀನಾ ಯೋಧರಿಗೆ ದಿಟ್ಟ ಉತ್ತರ ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಗಡಿ ಸಂಘರ್ಷ ಕುರಿತು ಮಾಹಿತಿ ನೀಡಿದ ರಾಜ್ ನಾಥ್ ಸಿಂಗ್ , ಭಾರತದ ಯಾವುದೇ ಯೋಧನಿಗೆ ಗಂಭೀರವಾದ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಿ.9 ರಂದು ಈ ಘಟನೆ ನಡೆದಿತ್ತು. ಚೀನಾದ ಅತಿಕ್ರಮಣ
ಯತ್ನವನ್ನು ಹಿಮ್ಮೆಟ್ಟಿಸಲಾಗಿದೆ. ಭಾರತದ ಯೋಧರು ಪರಾಕ್ರಮ ಮೆರೆದಿದ್ದಾರೆ. ಇದಕ್ಕಾಗಿ ಯೋಧರನ್ನು ಅಭಿನಂದಿಸುತ್ತೇನೆ ಎಂದು ರಾಜ್ ನಾಥ್ ಸಿಂಗ್ ಸದನಕ್ಕೆ ತಿಳಿಸಿದರು.
ಭಾರತದ ಯಾವುದೇ ಯೋಧ ಘರ್ಷಣೆಯಲ್ಲಿ ಹುತಾತ್ಮನಾಗಿಲ್ಲ ಎಂದು ರಾಜ್ ನಾಥ್ ಸಿಂಗ್ ಸ್ಪಷ್ಟಪಡಿಸಿದರು.















