ಮುಂಬೈ : ಶಾಲಾ ಪ್ರವಾಸದ ಬಸ್ ಪಲ್ಟಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಹಳೆಯ ಮುಂಬೈ-ಪುಣೆ ಹೆದ್ದಾರಿಯ ಖೋಪೋಲಿ ಬಳಿ ಭಾನುವಾರ ರಾತ್ರಿ ಕೋಚಿಂಗ್ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಐಷಾರಾಮಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 48 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಬಸ್ ಪುಣೆಯ ಲೋನಾವಾಲಾ ಗಿರಿಧಾಮದಿಂದ ಮುಂಬೈನ ಚೆಂಬೂರ್‌ಗೆ ತೆರಳುತ್ತಿತ್ತು.
ಬಸ್‌ನಲ್ಲಿ 50
ಜನರಿದ್ದರು – 10 ನೇ ತರಗತಿಯ 48 ವಿದ್ಯಾರ್ಥಿಗಳು, ಎಲ್ಲರೂ 15-17 ವರ್ಷದೊಳಗಿನವರು ಮತ್ತು ಇಬ್ಬರು ಶಿಕ್ಷಕರಿದ್ದರು.
ಅವರು ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಪಿಕ್ನಿಕ್ ಮುಗಿಸಿ ಹಿಂತಿರುಗುತ್ತಿದ್ದಾಗ ಘಾಟ್‌ಗಳ ಮ್ಯಾಜಿಕ್ ಪಾಯಿಂಟ್ ಬಳಿ ಬಸ್ ಪಲ್ಟಿಯಾಗಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು,ಆದರೆ ದುರದೃಷ್ಟವಶಾತ್ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ತಿಳಿಸಿದ್ದಾರೆ.














